Select Your Language

Notifications

webdunia
webdunia
webdunia
webdunia

ಇನ್ಮುಂದೆ ಪಾರ್ಲಿಮೆಂಟ್‌ಗೆ ಹೆಚ್ಚು ಹೋಗಲ್ಲ: ದೇವೇಗೌಡ

ಇನ್ಮುಂದೆ ಪಾರ್ಲಿಮೆಂಟ್‌ಗೆ ಹೆಚ್ಚು ಹೋಗಲ್ಲ: ದೇವೇಗೌಡ
ಹಾಸನ , ಮಂಗಳವಾರ, 28 ಫೆಬ್ರವರಿ 2017 (19:18 IST)
ಇನ್ಮುಂದೆ ಪಾರ್ಲಿಮೆಂಟ್‌ಗೆ ಹೆಚ್ಚು ಹೋಗಲ್ಲ. ಸಂಕಷ್ಟದಲ್ಲಿರುವ ಜನರೊಂದಿಗೆ ಇರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
 
ಧರಣಿ ಬಳಿಕ ಯುಗಚಿಯಿಂದ ನೀರು ಬಿಡಲಾಗುತ್ತಿದೆ. ಸಮರ್ಪಕವಾಗಿ ನೀರು ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯುತ್ತೇನೆ. ಒಂದು ವೇಳೆ, ಸ್ಪಂದನೆ ದೊರೆಯದಿದ್ದಲ್ಲಿ ಸಿಎಂ ನಿವಾಸದ ಎದುರು ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನದ ಬಗ್ಗೆ ದಿವ್ಯ ನಿರ್ಲಕ್ಷ ತೋರುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. ಹೋರಾಟ ಮಾಡಲು ಪ್ರೇರೇಪಿಸಬೇಡಿ ಎಂದು ಮನವಿ ಮಾಡಿದರು.
 
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ನಂತರ ಅಧಿಕಾರ ಹಿಡಿಯಲು ಉಭಯ ಪಕ್ಷಗಳು ರಣತಂತ್ರ ರೂಪಿಸಲಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್