Webdunia - Bharat's app for daily news and videos

Install App

ಬಿಜೆಪಿ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್: ಈಗ ಕಾಂಗ್ರೆಸ್ ಸರ್ಕಾರದ ಮೇಲೆಯೇ ಕಮಿಷನ್ ಆರೋಪ

Krishnaveni K
ಸೋಮವಾರ, 3 ಮಾರ್ಚ್ 2025 (13:50 IST)
ಬೆಂಗಳೂರು: ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಮೇಲೆಯೇ ಈಗ ಕಮಿಷನ್ ಆರೋಪ ಕೇಳಿಬಂದಿದೆ.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದೇ ಇರುವುದಕ್ಕೆ ಈ ಕಮಿಷನ್ ಆರೋಪವೂ ಮುಖ್ಯ ಕಾರಣವಾಗಿತ್ತು. ಕಮಿಷನ್ ಆರೋಪವನ್ನಿಟ್ಟುಕೊಂಡು ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ‘ಪೇಸಿಎಂ’ ಅಭಿಯಾನ ನಡೆಸಿತ್ತು.

ಆದರೆ ಈಗ ಕಾಂಗ್ರೆಸ್ ಸರ್ಕಾರಕ್ಕೂ ಕಮಿಷನ್ ದಂಧೆ ಆರೋಪ ತಟ್ಟಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ಮಿತಿ ಮೀರಿದೆ ಎಂದು ಆರೋಪಿಸಿ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ದೂರು ನೀಡಲು ಮುಂದಾಗಿದೆ. ಇದರ ನಡುವೆಯೇ ಎಚ್ಚೆತ್ತುಕೊಂಡ ಡಿಸಿಎಂ ಡಿಕೆ ಶಿವಕುಮಾರ್ ಗುತ್ತಿಗೆದಾರರೊಂದಿಗೆ ಇಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಗುತ್ತಿಗೆದಾರರು ತಮಗೆ ಬಾಕಿಯಾಗಿರುವ ಬಿಲ್ ಕ್ಲಿಯರ್ ಆಗಬೇಕು, ಕಮಿಷನ್ ದಂಧೆ ಕಡಿಮೆಯಾಗಬೇಕು ಎಂದು ಬೇಡಿಕೆ ಮುಂದಿಡಲಿದ್ದಾರೆ. ಬಾಕಿ ಕ್ಲಿಯರ್ ಆಗದೇ ಇದ್ದಲ್ಲಿ ರಾಹುಲ್ ಗಾಂಧಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments