Webdunia - Bharat's app for daily news and videos

Install App

ಸಿದ್ದರಾಮಯ್ಯ ಮುಟ್ಟಿದ್ರೆ ಬಾಂಗ್ಲಾದಂತೆ ಮೋದಿ ಮನೆಗೂ ನುಗ್ತಾರೆ: ಕೈ ಶಾಸಕ ಎಚ್ಚರಿಕೆ

Krishnaveni K
ಬುಧವಾರ, 28 ಆಗಸ್ಟ್ 2024 (14:04 IST)
Photo Credit: X
ಬೆಂಗಳೂರು: ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಬಾಂಗ್ಲಾದೇಶದಲ್ಲಿ ಆದಂತೆ ಮೋದಿ ಮನೆಗೂ ಜನ ನುಗ್ತಾರೆ ಎಂದು ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಡಾ ಹಗರಣವನ್ನಿಟ್ಟುಕೊಂಡು ಕೇಂದ್ರ ನಾಯಕರಾದ ಅಮಿತ್ ಶಾ, ಮೋದಿ ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದೆ ಬಾಂಗ್ಲಾದೇಶ ಪ್ರಧಾನಿ ನಿವಾಸಕ್ಕೆ ಜನ ನುಗ್ಗಿದಂತೆ ಮೋದಿ ನಿವಾಸಕ್ಕೂ ಜನ ನುಗ್ಗುವ ಕಾಲ ದೂರವಿಲ್ಲ ಎಂದು ರೋಣ ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್ ಹೇಳಿದ್ದಾರೆ.

ಅವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮೊದಲು ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಕೂಡಾ ಇಂತಹದ್ದೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಇದೀಗ ಜಿಎಸ್ ಪಾಟೀಲ್ ಕೂಡಾ ಇದೇ ಮಾತುಗಳನ್ನು ಹೇಳಿದ್ದು, ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಗಜೇಂದ್ರಗಡದಲ್ಲಿ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಜಿಎಸ್ ಪಾಟೀಲ್, ನಾವೆಲ್ಲಾ ಒಂದಾಗಬೇಕು, ಒಗ್ಗಟ್ಟಾಗಿ ಹೋರಾಡಬೇಕು. ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ಅಮಿತ್ ಶಾ ಅವರೇ ಕಾರಣ. ಅವರು ರಾಜಕೀಯ ಜೀವನದ್ದುದ್ದಕ್ಕು ಇಂತಹದ್ದನ್ನೇ ಮಾಡಿಕೊಂಡು ಬಂದವರು. ಹೀಗೇ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಆದಂತೆ ಇಲ್ಲೂ ಪ್ರಧಾನಿ ಮನೆಗೆ ಜನ ನುಗ್ಗುವ ಕಾಲ ದೂರವಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

AirIndia Crash: ಭಾರತದಲ್ಲಿ ಇದು ಕೊನೆಯ ರಾತ್ರಿ: ಲಂಡನ್ ಮೂಲದ ಜೇಮೀ ಮೀಕ್ ಭಾವುಕ ಪೋಸ್ಟ್‌

Air India Mishap: ಕೊನೆ ಕ್ಷಣದಲ್ಲಿ ಫೈಲಟ್ ಆ ಪದ ಬಳಸಬೇಕೆಂದರೆ ಎಂಥ ಕಠಿಣ ಪರಿಸ್ಥಿತಿ ಇತ್ತು ಗೊತ್ತಾ

Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

Air India Filght Crash: ಸಹ ಪೈಲಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಸಾವು

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

ಮುಂದಿನ ಸುದ್ದಿ
Show comments