Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ಈಗ ಹಿಂದೂಗಳೇ ಟಾರ್ಗೆಟ್

Bangladesh protest

Krishnaveni K

ಢಾಕಾ , ಬುಧವಾರ, 7 ಆಗಸ್ಟ್ 2024 (10:39 IST)
Photo Credit: Facebook
ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ಆರಂಭವಾದ ಹೋರಾಟ ಈಗ ಮೂಲ ಉದ್ದೇಶವೇ ಮರೆತು ಹಳಿ ತಪ್ಪಿದ ಹಿಂಸಾಚಾರವಾಗಿ ಮಾರ್ಪಟ್ಟಿದೆ. ಈಗ ಪ್ರತಿಭಟನಾಕಾರರಿಗೆ ಹಿಂದೂಗಳೇ ಟಾರ್ಗೆಟ್ ಆಗಿದ್ದಾರೆ.

ಸೈನಿಕರ ಕುಟುಂಬಕ್ಕೆ ಶೇ.30 ರಷ್ಟು ಮೀಸಲಾತಿ ನೀಡಿರುವ ಸರ್ಕಾರದ ನೀತಿ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದರ ನಡುವೆ ಸ್ವತಃ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ನಿವಾಸವನ್ನೇ ಕಬ್ಜ ಮಾಡಿಕೊಂಡಿದ್ದಾರೆ.

ಆದರೆ ಇದೀಗ ಈ ಹೋರಾಟವನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಹಿಂದೂ ದೇವಾಲಯಗಳು, ಹಿಂದೂ ಜನ, ಮನೆಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮನೆಗಳ ಮೇಲೆ ದಾಳಿ, ಲೂಟಿ ನಡೆಯುತ್ತಿದೆ.

ಹಿಂದೂಗಳ ಮನೆಗಳನ್ನು ಲೂಟಿ ಮಾಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಅಪರಹರಿಸಲಾಗುತ್ತಿದೆ. ಹಿಂದೂಗಳಿಗೆ ಸೇರಿದ ಉದ್ಯಮಗಳ ಮೇಲೂ ದಾಳಿಯಾಗುತ್ತಿದೆ. ಹಿಂದೂಗಳ ಅಂಗಡಿ ಮಳಿಗೆಗಳಿಗೆ ನುಗ್ಗಿ ಸಿಕ್ಕಿದ್ದನ್ನು ದೋಚಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಬಾಗಿಲು ಭದ್ರಪಡಿಸಿ ಮನೆಯೊಳಗೇ ಭಯದಲ್ಲೇ ಕೂರುವ ಸ್ಥಿತಿ ನಿರ್ಮಾಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರು: ಕೇರಳ ಲಾರಿ ಡ್ರೈವರ್ ಅರ್ಜುನ್ ದೇಹ ಕೊನೆಗೂ ಪತ್ತೆ: ಖಷಿತಪಡಿಸಿಕೊಳ್ಳಲು ಹೀಗೆ ಮಾಡಲಿದ್ದಾರೆ ಪೊಲೀಸರು