Publish Date: Sat, 13 May 2023 (09:40 IST)
Updated Date: Sat, 13 May 2023 (09:57 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮತದಾರ ಕಾಂಗ್ರೆಸ್ ನ ಕೈ ಹಿಡಿದಿರುವ ಲಕ್ಷಣ ಕಾಣಿಸುತ್ತಿದೆ.
ಆರಂಭಿಕ ಹಂತದಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಬಿಜೆಪಿ ಸದ್ಯಕ್ಕೆ 84 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 111 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.
ಹೀಗಾಗಿ ಕಾಂಗ್ರೆಸ್ ಪಾಳಯದಲ್ಲಿ ಚಟವಟಿಕೆ ಜೋರಾಗಿದೆ. ಅಗತ್ಯ ಬಿದ್ದರೆ ಶಾಸಕರನ್ನು ರೆಸಾರ್ಟ್ ನಲ್ಲಿರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಶಾಸಕಾಂಗ ಸಭೆ ನಡೆಸಲೂ ತಯಾರಿ ನಡೆಸಲಾಗಿದೆ.