Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಲಿ: ವೇಣುಗೋಪಾಲ್

ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಲಿ: ವೇಣುಗೋಪಾಲ್
ಬೆಂಗಳೂರು , ಮಂಗಳವಾರ, 23 ಮೇ 2017 (14:10 IST)
ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಲಹೆ ನೀಡಿದ್ದಾರೆ.
 
ಬಳ್ಳಾರಿಯಲ್ಲಿ ಲಾಡ್ ಬ್ರದರ್ಸ್ ನಡುವಿನ ವೈಮನಸ್ಸಿನಿಂದಾಗಿ ಪಕ್ಷದ ಸಂಘಟನೆಗೆ ಕುಂಠಿತವಾಗಿದೆ ಎಂದು ಬಳ್ಳಾರಿ ಕಾಂಗ್ರೆಸ್ ಮುಖಂಡರು ಸಚಿವ ಸಂತೋಷ್ ಲಾಡ್ ಸಮ್ಮುಖದಲ್ಲಿಯೇ ಆರೋಪಿಸಿದಾಗ, ಅಮೆರಿಕ ಪ್ರವಾಸದಲ್ಲಿರುವ ಅನಿಲ್ ಲಾಡ್ ದೇಶಕ್ಕೆ ವಾಪಸ್ ಬಂದೊಡನೆ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
 
ಇದೇ ಸಂದರ್ಭದಲ್ಲಿ ಸಭೆಗೆ ಏಕಾಂಗಿಯಾಗಿ ಬಂದ ಸಚಿವ ಶರಣ್ ಪ್ರಕಾಶ್ ಪಾಟೀಲ್ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ, ಚುನಾವಣೆ ಸಿದ್ದತೆಗೆ ಕರೆದಿದ್ರೆ ಎಲ್ರಿ ನಿಮ್ಮ ಜಿಲ್ಲೆಯ ಕಾಂಗ್ರೆಸ್ ಮುಖಂಡರು? ಎಂದು ತರಾಟೆಗೆ ತೆಗೆದುಕೊಂಡರು.
 
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಪರಸ್ಪರಲ್ಲಿನ ಭಿನ್ನಮತ ಮರೆತು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವತ್ತ ಗಮನಹರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಜನಿ ಪರ ಪ್ರತಿಭಟನೆ: 100ಕ್ಕೂ ಹೆಚ್ಚು ತಲೈವಾ ಅಭಿಮಾನಿಗಳು ಅರೆಸ್ಟ್