Select Your Language

Notifications

webdunia
webdunia
webdunia
webdunia

ರಜನಿ ಪರ ಪ್ರತಿಭಟನೆ: 100ಕ್ಕೂ ಹೆಚ್ಚು ತಲೈವಾ ಅಭಿಮಾನಿಗಳು ಅರೆಸ್ಟ್

ರಜನಿ ಪರ ಪ್ರತಿಭಟನೆ: 100ಕ್ಕೂ ಹೆಚ್ಚು ತಲೈವಾ ಅಭಿಮಾನಿಗಳು ಅರೆಸ್ಟ್
ಚೆನ್ನೈ: , ಮಂಗಳವಾರ, 23 ಮೇ 2017 (13:24 IST)
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ತಮಿಳು ಮುನ್ನೇತ್ರ ಸಂಘಟನೆ ವಿರುದ್ಧ ರಜನಿ ಅಭಿಮಾನಿಗಳು ಇಂದು ರಸ್ತೆಗೆ ಇಳಿದಿದ್ದಾರೆ.
 
ತಮಿಳು ಮುನ್ನೇತ್ರ ಸಂಘಟನೆ ನಾಯಕಿ ವೀರಲಕ್ಷ್ಮಿ ಪ್ರತಿಕೃತಿ ಧಹನ ಮಾಡಿದ ರಜನಿ ಅಭಿಮಾನಿಗಳು, ರಜನಿ ರಾಜಕೀಯ ಪ್ರವೇಶಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಗರದ ಹಲವು ಪ್ರದೇಶಗಳಲ್ಲಿ ಇಂದು ರಜನಿ ಅಭಿಮಾನಿಗಳು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ರಜನಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವುದನ್ನು ಪ್ರಮುಖ ಪಕ್ಷಗಳು ಸ್ವಾಗತಿಸಿದ್ದರೂ ಸಣ್ಣಪುಟ್ಟ ತಮಿಳು ಸಂಘಟನೆಗಳು ರಜನಿ ರಾಜಕೀಯ ಪ್ರವೇಶವನ್ನು ವಿರೋಧಿಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಂಇಎಸ್ ಸದಸ್ಯರ ವಿರುದ್ಧ ಸಚಿವ ರೋಷನ್ ಬೇಗ್ ವಾಗ್ದಾಳಿ