Publish Date: Fri, 11 Mar 2022 (06:39 IST)
Updated Date: Fri, 11 Mar 2022 (03:40 IST)
ದೇಶದಲ್ಲಿ ಕಾಂಗ್ರೆಸ್ ಮುಳುಗಿಹೋಗಿದೆ. ಮುಂದೆ ಕರ್ನಾಟಕದಲ್ಲಿಯೂ ಮುಳುಗಲಿದೆ.
ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ, ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ದಿಕ್ಕು ತೋಚದ, ದಿಕ್ಕಾಪಾಲಾಗಿರುವ ಧೂಳೀಪಟವಾಗಿರುವ ಪಕ್ಷ. ಇಡೀ ರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.
ಭಾಜಪ ದೇಶದ ಭವಿಷ್ಯಕ್ಕಾಗಿ ಹೋರಾಟ ಮತ್ತು ಕೆಲಸವನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ನವರು ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾರೆ. ಇದು ವ್ಯತ್ಯಾಸ. ನಾಲ್ಕು ರಾಜ್ಯಗಳಲ್ಲಿ ವಿಜಯ ಗಳಿಸಿದೆ. ಮಂದೆ ಗುಜರಾತ್, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕರ್ನಾಟಕದಲಿ ಭಾಜಪ ಹುಟ್ಟುವುದು ಅಷ್ಟೇ ಸತ್ಯ ಎಂದರು.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರ ನೋಂದಣಿ ಮಾಡಿಸುವವರಿಗೆ ಫ್ರಿಡ್ಜ್, ಟಿವಿಯನ್ನು ಸಿದ್ಧರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ನೀಡಲಾಗಿದೆ. ಕಾಂಗ್ರೆಸ್ನವರಿಗೆ ತೆಗೆದುಕೊಳ್ಳುವುದು ಕೊಡುವುದು ಕರಗತವಾಗಿರುವಂಥದ್ದು.
ಯಾವ ಕೆಲಸವೂ ಆಗುವುದಿಲ್ಲ. ಈಗೇನು ಕೊಡುತ್ತಾರೋ, ಅದಕ್ಕೆ ಹತ್ತುಪಟ್ಟು ಅಧಿಕಾರಕ್ಕೆ ಬಂದ ನಂತರ ತೆಗೆದುಕೊಳ್ಳುತ್ತಾರೆ. ಈ ದುಸ್ಥಿತಿಯಲ್ಲಿ ಅವರಿದ್ದಾರೆ.