Select Your Language

Notifications

webdunia
webdunia
webdunia
webdunia

ಅಂಬೇಡ್ಕರ್ ಮದ್ಯಸೇವಿಸಿ ಸಂವಿಧಾನ ಬರೆದಿದ್ದರು ಎಂದಿದ್ದ ಕೇಜ್ರಿವಾಲ್‌: ಛಲವಾದಿ

DR BR Ambedkar, BJP Leader Chalawadi Narayanaswamy,  AAP Leader Aravindh Kejwrial On Ambedkar

Sampriya

ಬೆಂಗಳೂರು , ಮಂಗಳವಾರ, 24 ಡಿಸೆಂಬರ್ 2024 (18:48 IST)
Photo Courtesy X
ಬೆಂಗಳೂರು: ಈ ಸಂವಿಧಾನ ನೀಡಿದ್ದು ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಎಂದು ಮಾನ್ಯ ಅನಿಲ್ ಲಾಡ್ ಅವರು ಹೇಳಿದ್ದರು. ಅದು ದೊಡ್ಡದಾಗಿ ವೈರಲ್ ಆಗಿತ್ತು. ಆಗ ಒಬ್ಬ ಕಾಂಗ್ರೆಸ್ಸಿಗರೂ ಮಾತನಾಡಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 155 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಮದ್ಯ ಸೇವಿಸಿಯೇ ಸಂವಿಧಾನ ಬರೆದಿದ್ದಾರೆ (ದಾರು ಪೀಕೆ ಸಂವಿಧಾನ್ ಲಿಖಾ) ಎಂಬುದಾಗಿ ಇಂಡಿ ಒಕ್ಕೂಟದ ಕೇಜ್ರಿವಾಲ್ ಅವರು ಹೇಳಿದ್ದಾರೆ. ಇದು ವಿಡಿಯೋವಾಗಿ ಇದೆ. ಇದಕ್ಕೆ ಕಾಂಗ್ರೆಸ್ಸಿನ ಉತ್ತರ ಏನು? ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕಾಂಗ್ರೆಸ್ ಮುಖಂಡರು ತಮ್ಮ ಅವಮಾನ ಸಹಿಸಿಕೊಳ್ಳಲಾಗದೆ, ಅಮಿತ್ ಶಾ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದ ಅವರು, ಬಾಬಾ ಸಾಹೇಬರಿಗೆ ನಾವು ಅನ್ಯಾಯ ಮಾಡಿದ್ದೇವೆ; ಚುನಾವಣೆಯಲ್ಲಿ ಸೋಲಿಸಿದ್ದೇವೆ. ಅವರು ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೂ ಜಾಗ ಕೊಟ್ಟಿಲ್ಲ; ಈ ದೊಡ್ಡ ಅಪರಾಧ ಕಾಂಗ್ರೆಸ್ಸಿನ ಮೇಲೆ ಇದೆ ಎಂದು ಸದನದಲ್ಲಿ ಮಾನ್ಯ ರಮೇಶ್‍ಕುಮಾರ್ ಅವರೇ ಒಪ್ಪಿಕೊಂಡಿದ್ದರು ಎಂದು ಗಮನ ಸೆಳೆದರು. ಕಾಂಗ್ರೆಸ್ಸಿನ ಬೇರೆಯವರು ಇದು ಸುಳ್ಳು ಎಂದಿಲ್ಲ; ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.

ಸಂವಿಧಾನ ಬದಲಿಸಲೇಬೇಕೆಂದು ರಾಜ್ಯದಲ್ಲಿ ಅಮರೇಗೌಡ ಬಯ್ಯಾಪುರ ಅವರು ಹೇಳಿದ ವಿಡಿಯೋ ನನ್ನ ಬಳಿ ಇದೆ. ಕಾಂಗ್ರೆಸ್ಸಿನ ಯಾರಾದರೂ ಇದನ್ನು ವಿರೋಧಿಸಿದ್ದೀರಾ ಎಂದು ಕೇಳಿದರು. ಅಂಬೇಡ್ಕರರ ಬಗ್ಗೆ ವಿಧವಿಧವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಬಾಯಿ ಬಿಚ್ಚಿಲ್ಲ ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲಿತ ಕೆಲವು ಸಂಘಟನೆಗಳು, ಕಾಂಗ್ರೆಸ್ ಪ್ರೇರೇಪಣೆಯಿಂದ ಹಾಗೂ ಕಾಂಗ್ರೆಸ್ ಕೂಡ ಬೀದಿಗಿಳಿದು ಅವರ ಹೇಳಿಕೆಯನ್ನು ವಿರೋಧಿಸುತ್ತಿವೆ ಎಂದು ಆಕ್ಷೇಪಿಸಿದರು.

ಕೇಳಿದ್ದು ಸುಳ್ಳಾಗಬಹುದು; ನೋಡಿದ್ದು ಸುಳ್ಳಾಗಬಹುದು; ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂದು ಹಾಡು ಕೇಳಿದ್ದೇವೆ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಈ ಹೋರಾಟಗಾರರಿಗೆ ಅರ್ಥವಾದ ಸತ್ಯಾಂಶ ಏನು ಎಂದು ಪ್ರಶ್ನಿಸಿದರು.

ಅಮಿತ್ ಶಾ ಅವರ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ. ನನಗೂ ಅದು ಗೊತ್ತಿದೆ. ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ ಅಂಬೇಡ್ಕರರ ಜೀವಿತಾವಧಿಯಿಂದ ಇಲ್ಲಿನವರೆಗೆ ಅವರ ವಿರುದ್ಧವಾಗಿ ನಡೆದುಕೊಂಡ ವಿಷಯವನ್ನು ಸಂಪೂರ್ಣವಾಗಿ ವಿವರಿಸಿದ್ದರಿಂದ ಕಾಂಗ್ರೆಸ್ಸಿಗೆ ಮುಜುಗರವಾಗಿದೆ. ಅಪಮಾನವಾಗಿದ್ದು, ಸಹಿಸಲಾಗದ ಪರಿಸ್ಥಿತಿಗೆ ಅವರು ಬಂದು ನಿಂತಿದ್ದಾರೆ ಎಂದು ವಿಶ್ಲೇಷಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿ ಬಂಧನ ಹಿಂದಿನ ಸತ್ಯಾಸತ್ಯತೆ ತಿಳಿಯಲು ರಾಜ್ಯಪಾಲರ ಮಧ್ಯಸ್ಥಿಗೆ ಬಿಜೆಪಿ ಮನವಿ