Publish Date: Wed, 27 Sep 2023 (14:00 IST)
Updated Date: Wed, 27 Sep 2023 (16:51 IST)
BJP ಜೊತೆ JDS ಮುಗಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ರು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೆಕ್ಯುಲಾರಿಸಂ ನಾಶ ಮಾಡಲು ಹೊರಟಿದ್ದು ಕಾಂಗ್ರೆಸ್, 2004ರಲ್ಲಿ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮ್ಮದ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ. ಅಮೆರಿಕದಿಂದ ಬಂದಾಗ 5 ಶಾಸಕರ ಬೆಂಬಲ ಅಂದಿದ್ರು. ಕಾಂಗ್ರೆಸ್ಸಿನ 5 ಶಾಸಕರನ್ನು ಹೊರ ಕಳಿಸುವುದಾಗಿ ಹೇಳಿದ್ರು.