ಮಂಗಳೂರಿನಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು SDPI ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ SDPI ಬೆಂಬಲ ಕೇಳಿದ್ದರು. ಮಂಗಳೂರಿನಲ್ಲಿ ಮಾತನಾಡಿದ SDPI ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಕಾಂಗ್ರೆಸಿನ ರಾಷ್ಟ್ರೀಯ ನಾಯಕರೇ SDPI ಬೆಂಬಲ ಕೇಳಿದ್ದರು, ಆದರೆ ಅವರ ಹೆಸರು ಹೇಳೋದಿಲ್ಲ ಎಂದಿದ್ದಾರೆ. ಹಾಗಾಗಿಯೇ 2018ರಲ್ಲಿ ಬಂಟ್ವಾಳದಲ್ಲಿ ಅಭ್ಯರ್ಥಿ ಘೋಷಿಸಿ ಕೊನೇ ಕ್ಷಣದಲ್ಲಿ ಹಿಂಪಡೆದಿದ್ದೆವು ಎಂದು ತಿಳಿಸಿದ್ದಾರೆ.. ಈ ಬಾರಿ ಹಾಗೇನೂ ಆಗಲ್ಲ, ನಾವು ಪ್ರಬುದ್ಧರಾಗಿದ್ದೇವೆ ಎಂದೂ ಸಹ ಅವರು ಹೇಳಿದ್ದಾರೆ. ಎಲ್ಲ ಕಡೆಯೂ ಸ್ಪರ್ಧೆ ಮಾಡೋದು ಖಚಿತ ಎಂದು ಮಹಮ್ಮದ್ ತುಂಬೆ ತಿಳಿಸಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಸ್ವತಃ ಇಲ್ಯಾಸ್ ಮಹಮ್ಮದ್ ತುಂಬೆ SDPI ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.