Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿದ್ದು ಖಾಲಿ ಜೇಬು: ಚೊಂಬು ಜಾಹೀರಾತಿಗೆ ಆರ್‌ ಅಶೋಕ್ ತಿರುಗೇಟು

BJP Karnataka

Sampriya

ಬೆಂಗಳೂರು , ಶುಕ್ರವಾರ, 19 ಏಪ್ರಿಲ್ 2024 (16:58 IST)
ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಚೆಂಬು ಜಾಹೀರಾತು ಇದೀಗ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಚೊಂಬು ಫೈಟ್ ಜೋರಾಗಿ ನಡೆಯುತ್ತಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆಯನ್ನು ಚೊಂಬುಗೆ ಹೋಲಿಕೆ ಮಾಡಿ ವ್ಯಂಗ್ಯ ಮಾಡಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ಗೆ ಕಾವೇರಿ ವಿವಾದದ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಈ ಸಂಬಂಧ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಬೆಂಗಳೂರಿನ ಜನತೆಗೆ ನಿಮ್ಮ ಕಾಂಗ್ರೆಸ್ ಸರ್ಕಾರದಿಂದ ಸಿಕ್ಕಿದ್ದು ಬರೀ ಬಾಂಬು, ಮತಾಂಧರು ರಾಜ್ಯದೆಲ್ಲೆಡೆ ಹಿಂದೂಗಳ ಮೇಲೆ ಅಟ್ಟಹಾಸ ಮೆರೆಯಿತ್ತಿರುವುದಕ್ಕೆ ಕಾರಣ ನಿಮ್ಮ ಕಾಂಗ್ರೆಸ್ ಸರ್ಕಾರದ ಒಲೈಕೆಯಿಂದ ಅವರಿಗೆ ಬಂದಿರುವ ಕೊಂಬು.

ಕಾವೇರಿಯ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ನಿಮ್ಮ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕೊಟ್ಟಿದ್ದು ಖಾಲಿ ಚೊಂಬು.

ಗರೀಬಿ ಹಠಾವೋ ಎಂದು 60 ವರ್ಷಗಳಿಂದ ಮೊಸಳೆ ಕಣ್ಣೀರು ಸುರಿಸಿ ಕಡೆಗೆ ನಿಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿದ್ದು ಖಾಲಿ ಜೇಬು.

ಜೂನ್ 4ರ ನಂತರ ನಿಮ್ಮ ಇಂಡಿ ಮೈತ್ರಿ ಕೂಟದ ಭ್ರಷ್ಟ ನಾಯಕರ ಗತಿ ಜೈಲಿನಲ್ಲಿ ಚಾಪೆ ದಿಂಬು.

Share this Story:

Follow Webdunia kannada

ಮುಂದಿನ ಸುದ್ದಿ

ಹುಬ್ಬಳ್ಳಿ ನೇಹಾ ಹತ್ಯೆಗೆ ರಾಜ್ಯಸರ್ಕಾರದ ತುಷ್ಠೀಕರಣ ಮನೋಭಾವವೇ ಕಾರಣ: ಜೆಡಿಎಸ್ ಆರೋಪ