Publish Date: Wed, 30 Sep 2026 (15:03 IST)
Updated Date: Wed, 30 Sep 2026 (14:28 IST)
ಚಿತ್ರದುರ್ಗ: ಬಿಜೆಪಿ ನಡೆಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಪ್ರೇರಣೆಯಿಂದಲೇ ಇಂದು ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.
ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ‘ಹಿಂದೂ ಮಹಾಗಣಪತಿ’ಯ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
“ಕೆಪಿಸಿಸಿ ಅಧ್ಯಕ್ಷರು ನನ್ನದೇ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ ಕೀರ್ತಿ ಶಿಕಾರಿಪುರಕ್ಕೆ ಸಲ್ಲುತ್ತದೆ. ಕೆಪಿಸಿಸಿ ಅಧ್ಯಕ್ಷರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ,” ಎಂದು ವಿಜಯೇಂದ್ರ ಹೇಳಿದರು.
ತಮ್ಮ ರಾಜಕೀಯ ಅನುಭವದ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ವಿಜಯೇಂದ್ರ, “ನಾನು ಎಲ್‌ಕೆಜಿ ವಿದ್ಯಾರ್ಥಿ ಇರಬಹುದು, ಮೊದಲ ಸಲ ಶಾಸಕನಾಗಿರಬಹುದು. ಆದರೆ ಹರಿಪ್ರಸಾದ್ ಅವರು ಪಿಎಚ್‌ಡಿ ಮಾಡಿದ್ದರೂ ಇದುವರೆಗೂ ನೇರ ಚುನಾವಣೆಯಲ್ಲಿ ಗೆದ್ದಿಲ್ಲ,” ಎಂದು ತಿವಿದರು.
ಕೆಲವರು ಬ್ಯಾನರ್ ಹರಿದು ಹಾಕಿಸಿಕೊಂಡೇ ಪ್ರಚಾರ ಪಡೆಯುತ್ತಿದ್ದಾರೆ. ಅಂತಹ 420 ರಾಜಕಾರಣ ನಮಗೆ ಬೇಕಾಗಿಲ್ಲ,” ಎಂದು ಅವರು ಕಟುವಾಗಿ ಟೀಕಿಸಿದರು.
ಆರ್‌ಟಿಜಿಎಸ್ ಮೂಲಕ ಹಣ ಪಡೆದಿರುವ ಕುರಿತ ಹರಿಪ್ರಸಾದ್ ಅವರ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, “ಹರಿಪ್ರಸಾದ್ ಅವರು ತಮ್ಮ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಈ ಎಲ್ಲ ಆರೋಪಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. ನಾನು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ,” ಎಂದು ಸ್ಪಷ್ಟಪಡಿಸಿದರು.
“ಹರಿಪ್ರಸಾದ್ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯಕ್ರಮಗಳಿಗೂ ಅವರನ್ನು ಕರೆಯುತ್ತಿಲ್ಲ. ಹೀಗಾಗಿ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ,” ಎಂದು ವಿಜಯೇಂದ್ರ ಆರೋಪಿಸಿದರು.
ಮಠಾಧೀಶರ ಕುರಿತ ಸರ್ಕಾರದ ಹೇಳಿಕೆಗೆ ಆಕ್ಷೇಪ
ಮಠಾಧೀಶರು ಸರ್ಕಾರದ ಯೋಜನೆಗಳ ರಾಯಭಾರಿಗಳಾಗಬೇಕು ಎಂಬ ಹೇಳಿಕೆಗೆ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಬರಗಾಲವಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ಇಂದು ಜನರು ಸರ್ಕಾರಕ್ಕೆ ಥೂ, ಛೀ ಎಂದು ಧಿಕ್ಕಾರ ಕೂಗುತ್ತಿದ್ದಾರೆ. ಮಠಾಧೀಶರು ನನ್ನ ಸೇವೆ ಮಾಡಬೇಕೆಂದು ಹೇಳುತ್ತಿದ್ದಾರೆ. ಆದರೆ ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ,” ಎಂದು ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ