ಬೆಂಗಳೂರು : 200 ಯೂನಿಟ್ ಅಂತ ಹೇಳಿ ಕಾಂಗ್ರೆಸ್ನವರು ಯಾಮಾರಿಸಿದ್ದಾರೆ. 200 ಯೂನಿಟ್ ಅನ್ನೋಕ್ಕೂ; 10% ಅನ್ನೋಕ್ಕೂ ವ್ಯತ್ಯಾಸವಿದೆ. ಇದು ಫ್ರೀ ಹೇಗಾಯ್ತು ಅಂತ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 200 ಯೂನಿಟ್ ಫ್ರೀಂ ಸ್ಕೀಂನಲ್ಲಿ ದೋಖಾ ಆಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅನ್ನಭಾಗ್ಯದಲ್ಲೂ ಗೊಂದಲವಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದ್ಯಾ?, 10 ಕೆಜಿ ಉಚಿತ ಅಕ್ಕಿ ಮಾತ್ರ ಕೊಡ್ತಾರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಆದರೆ ಈಗ ಇವರು ಹೇಳಿದ ಪ್ರಕಾರ, ತಮ್ಮ ವಿದ್ಯುತ್ ಶಕ್ತಿ ಬಳಕೆ 70 ಇರೋದು 80 ಮಾಡಬಹುದು ಅಂದಿದ್ದಾರೆ. 200 ಯೂನಿಟ್ ಫ್ರೀ ಅಂದಿದ್ದಾರೆ. 200 ಯೂನಿಟ್ ಫ್ರೀ ಅನ್ನೋದಕ್ಕೂ ವಾರ್ಷಿಕ ಸರಾಸರಿ 10% ಹಾಕಿ ಕೊಡುತ್ತೇವೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಇದು 200 ಯೂನಿಟ್ ಫ್ರೀ ಇಲ್ಲ ಯಾಮಾರಿಸಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.