Publish Date: Fri, 02 Jun 2023 (09:43 IST)
Updated Date: Fri, 02 Jun 2023 (10:45 IST)
ಬೆಂಗಳೂರು : ಸರ್ಕಾರದ ಹೈವೋಲ್ಟೇಜ್ ಸಚಿವ ಸಂಪುಟ ಸಭೆ ಇಂದು (ಶುಕ್ರವಾರ) ನಡೆಯಲಿದೆ. ಭಾರೀ ಕುತೂಹಲ ಮೂಡಿಸಿರುವ ಸಂಪುಟ ಸಭೆಯಲ್ಲಿ ಸರ್ಕಾರ ತನ್ನ ಭರವಸೆಯ ಗ್ಯಾರಂಟಿಗಳ ಜಾರಿಯ ಘೋಷಣೆ ಮಾಡುವ ಸಾಧ್ಯತೆ ಇದೆ.
ಅದು ಐದು ಗ್ಯಾರಂಟಿಗಳ ಘೋಷಣೆನಾ ಅಥವಾ ಮೂರು ಗ್ಯಾರಂಟಿಗಳ ಜಾರಿನಾ ಎಂಬ ಪ್ರಶ್ನೆ ಜೊತೆಗೆ ಯಾವ ಕಂಡೀಶನ್ ಹಾಕಬಹುದು ಎಂಬ ಕುತೂಹಲವು ಮೂಡಿದೆ.