ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ದೂರು

ಗುರುವಾರ, 14 ಮಾರ್ಚ್ 2019 (16:49 IST)
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.

ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ದೂರು ದಾಖಲಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹುಟ್ಟಿನ ಮೂಲವನ್ನು ಪ್ರಶ್ನಿಸುವ ಮೂಲಕ ಅನಂತ್ ಕುಮಾರ್ ಹೆಗ್ಡೆ, ರಾಹುಲ್ ಅವರನ್ನು ತೇಜೋವಧೆ ಮಾಡಿದ್ದಾರೆ.

ಕೆಲ ದಿನಗಳ‌ ಹಿಂದೆ ಅನಂತಕುಮಾರ್ ಹೆಗ್ಡೆ, ರಾಹುಲ್ ಗಾಂಧಿ ಅವರ ತಂದೆ ಮುಸಲ್ಮಾನರು, ತಾಯಿ ಕ್ರೈಸ್ತರು. ಅವರ ಡಿಎನ್ಏ ಪರೀಕ್ಷಿಸಿ ಎನ್ನುವ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಈ ಹೇಳಿಕೆ ಖಂಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ HDK- ಸುಮಲತಾ ನಡುವೆ ನಡೆದದ್ದೇನು?