Select Your Language

Notifications

webdunia
webdunia
webdunia
webdunia

ಸವಾಲಿಗೇ ಸವಾಲ್: ಅತ್ತ ಬಿಜೆಪಿ, ಇತ್ತ ಕಾಂಗ್ರೆಸ್ ಪ್ರತಿಭಟನೆ!

ಸವಾಲಿಗೇ ಸವಾಲ್: ಅತ್ತ ಬಿಜೆಪಿ, ಇತ್ತ ಕಾಂಗ್ರೆಸ್ ಪ್ರತಿಭಟನೆ!
ಬೆಂಗಳೂರು , ಸೋಮವಾರ, 21 ಆಗಸ್ಟ್ 2017 (11:20 IST)
ಬೆಂಗಳೂರು: ಶಿವರಾಮ ಕಾರಂತ ಬಡವಾಣೆ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಲುಕಿಸಿ ಕಾಂಗ್ರೆಸ್ ಸರ್ಕಾರ ಬಿಎಸ್ ಯಡಿಯೂರಪ್ಪ ಧ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಅತ್ತ ಕಾಂಗ್ರೆಸ್ ಪ್ರತಿಭಟನೆ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದೆ.

 
ಇಂದು ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ ವೈ  ಅವರ ಡಾಲರ್ಸ್ ಕಾಲೊನಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಘೋಷಣೆ ಕೂಗುತ್ತಾ ಮನೆಗೆ ಮುತ್ತಿಗೆ ಹಾಕಲು ಮುಂದಾದರು.  ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರನ್ನು ತಡೆದರು.

ಇನ್ನೊಂದೆಡೆ ಬಿಜೆಪಿ ಇಂದು ರಾಜಭವನಕ್ಕೆ ತೆರಳಿ ಬಿಎಸ್ ವೈ ವಿರುದ್ಧ ಧ್ವೇಷದ ರಾಜಕಾರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ ಎಂದು ಮನವಿ ನೀಡಲಿದೆ. ಹೀಗಾಗಿ ಡಿನೋಟಿಫಿಕೇಶನ್ ಪ್ರಕರಣ ಎನ್ನುವುದು ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಪ್ರತಿಷ್ಠೆಯ  ಕಣವಾಗಿ ಬಿಟ್ಟಿದೆ.

ಇದನ್ನೂ ಓದಿ.. ತಮಿಳುನಾಡು ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ