Select Your Language

Notifications

webdunia
webdunia
webdunia
webdunia

ಮತ್ತೆ ಮುಳುಗಿದ ಕಂಪ್ಲಿ ಸೇತುವೆ..!

Compli bridge sunk again
ಕೊಪ್ಪಳ , ಸೋಮವಾರ, 8 ಆಗಸ್ಟ್ 2022 (16:21 IST)
ಧಾರಾಕಾರ ಮಳೆಯಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗಿದೆ. ಇದರಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರೋ ಕಂಪ್ಲಿ ಸೇತುವೆ ಮತ್ತೆ ಮುಳುಗಡೆಯಾಗಿದೆ. ಇದು ಗಂಗಾವತಿ ಮತ್ತು ಕಂಪ್ಲಿಗೆ ಸಂಪರ್ಕ ಕಲ್ಪಿಸೋ ಸೇತುವೆಯಾಗಿದ್ದು, ಗಂಗಾವತಿ ಮತ್ತು ಕಂಪ್ಲಿ ನಡುವಿನ ಸಂಪರ್ಕ ಕಡಿತಗೊಂಡಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾದ ಹಿನ್ನೆಲೆ ಕಂಪ್ಲಿ ಸೇತುವೆ ಮೇಲೆ ನೀರು ಪ್ರವಾಹದ ರೀತಿ ಹರಿಯುತ್ತಿದೆ. ಒಂದೇ ತಿಂಗಳಲ್ಲಿ ಮೂರನೇ ಬಾರಿ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ