Publish Date: Mon, 08 Aug 2022 (16:06 IST)
Updated Date: Mon, 08 Aug 2022 (16:13 IST)
ಹುಬ್ಬಳ್ಳಿಯಲ್ಲೂ ನಿರಂತರವಾಗಿ ಮಳೆಯಾಗ್ತಿದೆ. ಹುಬ್ಬಳ್ಳಿಯಲ್ಲಿ ಸುರಿಯುತ್ತಿರೋ ಸತತ ಮಳೆಯಿಂದ ಮನೆ ಕುಸಿದು ಬಿದ್ದಿದೆ. ಕಲಘಟಗಿ ತಾಲೂಕಿನ ಕಾಡನ ಕೊಪ್ಪ ಗ್ರಾಮದಲ್ಲಿ ಅವಘಡ ಸಂಭವಿಸಿದೆ. ರಾತ್ರಿ ವೇಳೆ ಮನೆಯವರು ಊಟಕ್ಕೆ ಕುಳಿತ ಸಮಯದಲ್ಲಿ ಮನೆ ಕುಸಿದು ಬಿದ್ದಿದೆ. ಅಶೋಕ್ ಸಿದ್ದಪ್ಪ ಮಿಶ್ರಿಕೋಟಿ ಎನ್ನುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯವರ ಸಮಯ ಪ್ರಜ್ಞೆಯಿಂದ ಸದ್ಯ ಮನೆಯಲ್ಲಿ ವಾಸವಿದ್ದ ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಅಲ್ಲದೆ ನಿನ್ನೆ ಒಂದೇ ದಿನ ತಾಲೂಕಿನಲ್ಲಿ 20 ಮನೆ ಕುಸಿತವಾಗಿದ್ರು ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿರೋದು ಗ್ರಾಮಸ್ಥರ ಅಳಲು ಕೇಳೋರಿಲ್ಲದಂತಾಗಿದೆ. ಇನ್ನಾದ್ರು ಅಧಿಕಾರಿಗಳು ಸೂರು ಕಳೆದು ಕೊಂಡವರ ನೆರವಿಗೆ ಧಾವಿಸಬೇಕು ಅಂತ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.