Select Your Language

Notifications

webdunia
webdunia
webdunia
webdunia

ವಂಚನೆ ಸಂಬಂಧ ಪೊಲೀಸ್ ಠಾಣೆಗೆ ದೂರು..!

ವಂಚನೆ ಸಂಬಂಧ ಪೊಲೀಸ್ ಠಾಣೆಗೆ ದೂರು..!
bangalore , ಭಾನುವಾರ, 15 ಆಗಸ್ಟ್ 2021 (21:55 IST)
ವಂಚನೆ ಸಂಬಂಧ ದೂರು ನೀಡಿದ್ದಕ್ಕೆ ನಿವೃತ್ತ ಸರಕಾರಿ ಅಧಿಕಾರಿ ಕುಟುಂಬದ ಮಹಿಳೆ ಸೇರಿ ಕೆಲ ಸದಸ್ಯರು ಯುವ ವಕೀಲನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗಡೆ ನಗರ ನಿವಾಸಿ ಎಂ.ಎಲ್.ರೆಹಮಾನ್ ಹಲ್ಲೆಗೊಳಗಾದ ಯುವ ವಕೀಲ.  ಈ ಸಂಬಂಧ ಪಕ್ಕದ ಮನೆ ನಿವಾಸಿ ಹಾಗೂ ಕಾರ್ಮಿಕ ಆಯೋಗದ ನಿವೃತ್ತ ಆಯಕ್ತ ಸಮೀವುಲ್ಲಾ ಷರೀಫ್ ಹಾಗೂ ಅವರ ಕುಟುಂಬ ಸದಸ್ಯರಾದ ಅಲ್ತಾಫ್, ಅಜ್ಮಲ್, ಮತ್ತು ಆಯಿಷಾ ಷರೀಫ್ ಎಂಬುವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಲ್ಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ಹೇಳಿದರು.
ಏನಿದು ಘಟನೆ?
ವೃತ್ತಿಯಲ್ಲಿ ವಕೀಲರಾಗಿರುವ ರೆಹಮಾನ್ ತಾಯಿಗೆ ಯಾಮಾರಿಸಿ ನೆರೆ ಮನೆಯ ಸಮೀವು¯್ಲÁ ನಿವೇಶನ ಲಪಟಾಯಿಸಿದ್ದ. ಈ ಕುರಿತಂತೆ ಆತನ ವಿರುದ್ಧ ರೆಹಮಾನ್ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಕೆಲ ದಿನಗಳ ಹಿಂದೆ ರೆಹಮಾನ್ ತನ್ನ ಮನೆಯ ಮೇಲ್ಭಾಗದಲ್ಲಿ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದ. ನಮ್ಮ ಮನೆಯ ಕಟ್ಟಡದ ಗೋಡೆಯಿಂದ 6 ಇಂಚು ಅಂತರ ಕಾಪಾಡುವಂತೆ ಸಮೀವು¯್ಲÁ ರೆಹೆಮಾನ್‍ಗೆ ಹೇಳಿದನಂತೆ. ಇದಕ್ಕೆ ತನ್ನ ತಂದೆ-ತಾಯಿ ಜತೆ ಮಾತನಾಡುವಂತೆ ರೆಹಮಾನ್ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಷರೀಫ್ ರೆಹಮನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ವ್ಯಕ್ತಿ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಈ ಬಗ್ಗೆ ದೂರು ಕೊಡಲು ನಿಶ್ಚಯಿಸಿದ್ದರು. 
ಮೊದಲೇ ಹಗೆ ಸಾಧಿಸುತ್ತಿದ್ದ ಅಲ್ತಾಫ್ ಆ.3ರಂದು ಮನೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ರೆಹಮಾನ್ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಈ ವೇಳೆ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡರೂ ಬಿಡದೆ ರೆಹಮಾನ್‍ನನ್ನು ಹೊರಗೆಳೆದುಕೊಂಡು ಬಂದು ಅಜ್ಮಲ್, ಷರೀಫ್, ಆಯೇಷಾ ಷರೀಫ್ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆರೊಪಿಗಳು ಯುವಕನಿಗೆ ಹಲ್ಲೆ ನಡೆಸಿರುವ ದೃಶ್ಯ ಸ್ಥಳೀಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
 ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ಠಾಣಾ ಜಾಮೀನು ನೀಡಿ ಕಳುಹಿಸಲಾಗಿದೆ ಎಂದು ಪೆÇಲೀಸರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೀವಂತ ಆಗಿದ್ದರೆ ಈ ಅವಧಿಯಲ್ಲೇ ಸಿಎಂ ಆಗ್ತೇನೆ: ಉಮೇಶ್ ಕತ್ತಿ