Webdunia - Bharat's app for daily news and videos

Install App

ಬಿಜೆಪಿ ನಾಯಕರ ಭೂ ಪುರಾಣಗಳ ದೂರು ನೀಡಿದ್ರೆ ರಾಜ್ಯಪಾಲರ ಕಪಾಟು ಸಾಕಾಗಲ್ಲ

Sampriya
ಗುರುವಾರ, 5 ಸೆಪ್ಟಂಬರ್ 2024 (18:43 IST)
ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮದ ಪ್ರಕಾರವೇ ಸಿಎ ನಿವೇಶನ ನೀಡಿದ್ದರ ಬಗ್ಗೆ ಹೊಟ್ಟೆಯಲ್ಲಿ ಹುಳು ಹೊಕ್ಕಂತೆ ಆಡುತ್ತಿರುವ ಬಿಜೆಪಿ ನಾಯಕರ ಭೂ ಪುರಾಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ ಎಂದು ಕಾಂಗ್ರೆಸ್ ಪೋಸ್ಟ್ ಹಂಚಿ ವ್ಯಂಗ್ಯ ಮಾಡಿದೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ಮುಡಾ, ವಾಲ್ಮೀಕಿ ಹಗರಣ ಸಂಚಲನ ಮೂಡಿಸಿದೆ. ಈ ಸಂಬಂಧ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದರೆ. ಇದಕ್ಕೆ ಕೌಂಟರ್ ಕೊಡುತ್ತಿರುವ ಕಾಂಗ್ರೆಸ್, ಒಂದು ವೇಳೆ ಬಿಜೆಪಿ ನಾಯಕರ ಭೂ ಪುರಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ ಎಂದಿದೆ.

ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮದ ಪ್ರಕಾರವೇ ಸಿಎ ನಿವೇಶನ ನೀಡಿದ್ದರ ಬಗ್ಗೆ ಹೊಟ್ಟೆಯಲ್ಲಿ ಹುಳು ಹೊಕ್ಕಂತೆ ಆಡುತ್ತಿರುವ ಬಿಜೆಪಿ
 ನಾಯಕರ ಭೂ ಪುರಾಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ!

ಚಲವಾದಿ ನಾರಾಯಣಸ್ವಾಮಿಯವರ ದಮ್ ಬಿರಿಯಾನಿ ಹೋಟೆಲ್ ಕತೆ ಈಗಾಗಲೇ ಬಹಿರಂಗವಾಗಿದೆ.

ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ ದೇವನಹಳ್ಳಿಯಲ್ಲಿ ಎಕರೆಗಟ್ಟಲೆ KIADB ನಿವೇಶನವನ್ನು ಪಡೆದುಕೊಂಡಿದ್ದು ತಮ್ಮ ಪ್ರಭಾವ ಬಳಸಿ ಅಲ್ಲವೇ?
SC/ST ಕೋಟಾದ ನಿವೇಶನ ಶಿವನಗೌಡ ನಾಯಕ್ ಅವರಿಗೆ ಕೊಟ್ಟಿದ್ದು ಬಿಜೆಪಿ ಸರ್ಕಾರವಲ್ಲವೇ?

ಇನ್ನು ವಿಜಯೇಂದ್ರರವರ ಭೂ ಪುರಾಣ ಹೇಳಿ ತೀರದಷ್ಟಿದೆ! ಪ್ರೇರಣಾ ಟ್ರಸ್ಟ್ ಭೂಮಿ ನುಂಗಿದ್ದು ಅಧಿಕಾರ ದುರ್ಬಳಕೆ ಅಲ್ಲವೇ?

ಅಶೋಕ್ ಅವರು ಎಲ್ಲೆಲ್ಲಿ,  ಹೇಗೆ ಹೇಗೆ, ಎಷ್ಟೆಷ್ಟು ಭೂಮಿ ಪಡೆದಿದ್ದಾರೆ ಎನ್ನುವುದನ್ನು ತಿಳಿಸಬೇಕೆ?

ಬಿಜೆಪಿ ಬಯಸಿದರೆ ಎಲ್ಲವನ್ನೂ ಜನರೆದುರು ಚರ್ಚಿಸಲು ನಾವು ಸಿದ್ದರಿದ್ದೇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments