Webdunia - Bharat's app for daily news and videos

Install App

B Dayanand: ಯಾರದ್ದೋ ತಪ್ಪಿಗೆ ಬಡ್ತಿ ಸಿಗಬೇಕಿದ್ದ ಪ್ರಾಮಾಣಿಕ ಕಮಿಷನರ್ ಬಿ ದಯಾನಂದ್ ಅಮಾನತು

Krishnaveni K
ಶುಕ್ರವಾರ, 6 ಜೂನ್ 2025 (08:28 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತಕ್ಕೆ ಈಗ ಕಮಿಷನರ್ ಬಿ ದಯಾನಂದ್ ತಲೆದಂಡವಾಗಿದೆ. ಯಾರದ್ದೋ ತಪ್ಪಿಗೆ ಪ್ರಾಮಾಣಿಕ ಕನ್ನಡಿಗ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಬಿ ದಯಾನಂದ್ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದವರು. ಆಗಲೇ ಸಿಎಂ ಸಿದ್ದರಾಮಯ್ಯ ಬಳಿ ಭೇಷ್ ಎನಿಸಿಕೊಂಡವರು. ಸಿಎಂ ಮೆಚ್ಚಿನ ಅಧಿಕಾರಿಯಾಗಿದ್ದ ಬಿ ದಯಾನಂದ್ ಕೆಲವೇ ದಿನಗಳಲ್ಲಿ ಬಡ್ತಿ ಪಡೆಯಬೇಕಿತ್ತು. ಆದರೆ ಈಗ ಬಡ್ತಿ ಸಮಯದಲ್ಲೇ ಅಮಾನತು ಆಗಿದ್ದಾರೆ. ಇದರೊಂದಿಗೆ ಅವರ ಮುಂಬಡ್ತಿ ಕನಸಿಗೆ ಕೊಳ್ಳಿ ಬಿದ್ದಿದೆ.

ಒಬ್ಬ ಕಮಿಷನರ್ ಅಮಾನತು ಆಗುತ್ತಿರುವುದು ಇದೇ ಮೊದಲು. ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು ಘಟನೆಯಲ್ಲಿ ದಯಾನಂದ್ ಗಿಂತ ಹೆಚ್ಚು ಹೊಣೆ ಹೊರಬೇಕಾಗಿದ್ದು ಸರ್ಕಾರ. ಎರಡೆರಡು ಕಡೆ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲದೆ, ಪೊಲೀಸರ ಸಲಹೆಯನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದ್ದು ಕೆಎಸ್ ಸಿಎ, ಆರ್ ಸಿಬಿ ತಪ್ಪು.

ಆದರೆ ಇದಕ್ಕಾಗಿ ದಕ್ಷ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರದ್ದೋ ತಪ್ಪಿಗೆ ದಯಾನಂದ್ ಹರಕೆ ಕುರಿಯಾದರು ಅಷ್ಟೇ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಡಿಕೆ ಶಿವಕುಮಾರ್ ಆರ್ ಎಸ್ಎಸ್ ಹಾಡಿಗೆ ಕೆಎನ್ ರಾಜಣ್ಣ ಗರಂ: ಅವರು ಏನು ಮಾಡಿದ್ರೂ ನಡೀತದೆ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇದೊಂದು ಕೆಲಸ ಮಾಡಬೇಕು

ಮತಪರಿಷ್ಕರಣೆ ಯಾಕೆ ಮುಖ್ಯ ಎನ್ನುವುದಕ್ಕೆ ಬಿಹಾರದ ಈ ಘಟನೆಯೇ ಸಾಕ್ಷಿ

ಮುಂದಿನ ಸುದ್ದಿ
Show comments