Select Your Language

Notifications

webdunia
webdunia
webdunia
webdunia

ಇಳಿದು ಬಾ, ಇಳಿದು ಬಾ, ಇಳಿದು ಬಾ: ಸಿದ್ದರಾಮಯ್ಯಗೆ ಟಾಂಗ್

ಇಳಿದು ಬಾ, ಇಳಿದು ಬಾ, ಇಳಿದು ಬಾ: ಸಿದ್ದರಾಮಯ್ಯಗೆ ಟಾಂಗ್
ಬೆಂಗಳೂರು , ಮಂಗಳವಾರ, 4 ಜೂನ್ 2019 (19:21 IST)
ಲೋಕಸಭಾ ಚುನಾವಣೆಗೂ ಮುನ್ನ ನಾನೇ ಮುಂದಿನ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದರು ಈಗ  ಫಲಿತಾಂಶ ಬಂದ ಮೇಲೆ ಇದೆಲ್ಲ ಇಳಿಯಿತಾ ? ಇಳಿದು ಬಾ ನೀ ಇಳಿದು ಬಾ ಇಳಿದು ಬಾ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟೈಲ್ ನಲ್ಲೇ  ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ತಮ್ಮ‌ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್ ಅವರು, ನಂದೇ ನಡಿಬೇಕು. ನಾನು ಹೇಳಿದ ಹಾಗೇ ನಡಿಬೇಕು ಅನ್ನೋ ಇಗೋ ಫೀಲ್ ಅವರಪ್ಪರಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಹೇಳಿ ನೀವೇ ಅವರನ್ನು ಸಿಎಂ ‌ಮಾಡಿದ್ರಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ, ನಾನು ಅವರ ನಿಲುವನ್ನು ಬೆಂಬಲಿಸಿತ್ತೇನೆ ಅವರ ಜೊತೆಯಲ್ಲಿಯೇ ಇರುತ್ತೇನೆ ಕಾಂಗ್ರೆಸ್ ನಲ್ಲಿ ಹಿರಿಯರ ಕಡೆಗಣಿಸಲಾಗುತ್ತಿದೆ, ನನಗೆ ಸಚಿವ ಸ್ಥಾನ ಕೊಟ್ಟಿಲ್ಲ ಸರಿ ಆದರೆ ರಾಮಲಿಂಗಾರೆಡ್ಡಿ,ಹೆಚ್.ಕೆ ಪಾಟೀಲ್ ಅವರಂತಹ ನಾಯಕರಿಗೂ ಸಚಿವ ಸ್ಥಾನ ನೀಡಲ್ಲ ಅಂದರೆ ಹೇಗೆ? ನಾನು ಪಕ್ಷದ ಶಿಸ್ತಿನ ಸಿಪಾಯಿ ಪಕ್ಷ ಬಿಡುವುದಿಲ್ಲ.ಬೇರೆ ಪಕ್ಷ ಸೇರುವುದು ಇಲ್ಲ.ನನ್ನ ಸ್ನೇಹಿತ ರಾಮಲಿಂಗ ರೆಡ್ಡಿ ಜತೆ ನಾನು ಸಹ ಇರ್ತಾನೆ ಆದರೆ ಈ ಸರ್ಕಾರದಲ್ಲಿ ಥೂ...ಥೂ ...ಥೂ ನಾನು ಮಂತ್ರಿ ಆಗಲ್ಲ ಎಂದರು.

ಇವರ ನೋಟಿಸ್ ಗೆ ನಾನ ಉತ್ತರ ಕೊಡಲ್ಲ, ನೋಟಿಸ್ ಕೊಡುವುದಾದರೆ ಕೋಲಾರದಲ್ಲಿ ಮುನಿಯಪ್ಪ ಅವರ ಸೋಲಿಗೆ ಕಾರಣರಾದ ಶಾಸಕರಗೆ ಕೊಡಲಿ, ದೇವೇಗೌಡರನ್ನು ಸೋಲಿಸಿದ್ದು ನಮ್ಮ ಪಕ್ಷದವರೇ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ, ಮಂಡ್ಯದಲ್ಲಿ ನಿಖಿಲ್ ವಿರುದ್ಧ ಬಹಿರಂಗವಾಗಿಯೇ ನಮ್ಮ ಪಕ್ಷದವರು ಕೆಲಸ ಮಾಡಿದರು ಅವರಿಗೆ ಏಕೆ ನೋಟಿಸ್ ನೀಡಿಲ್ಲ, ಇದೆಲ್ಲಾ ಕಣ್ಣ ಮುಂದಿದ್ದರೂ ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ ಇದನ್ನು ನೋಡಿದರೆ ನಗು ಬರುತ್ತಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಹಿನ್ನಡೆಗೆ ಹಿರಿಯ ನಾಯಕ ಕೆಂಡ; ಕಾಂಗ್ರೆಸ್ ನಲ್ಲಿ ಹೆಚ್ಚಿದ ತಳಮಳ