Select Your Language

Notifications

webdunia
webdunia
webdunia
webdunia

ಬಸ್ ನಿಲ್ದಾಣ ಬಳಿ ಕಾಲೇಜು ವಿದ್ಯಾರ್ಥಿ ಪಿಸ್ತೂಲ್ ನಿಂದ ಗುಂಡು ಹೊಡೆದುಕೊಂಡು ಸಾವು

College student shot dead by pistol near bus stop
bangalore , ಶುಕ್ರವಾರ, 17 ಸೆಪ್ಟಂಬರ್ 2021 (21:39 IST)
ಬೆಂಗಳೂರು: ದ್ದಾನೆ.
ಸಾವು ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ತಂದೆಯ ಪಿಸ್ತೂಲ್​​​ನಿಂದಲೇ ವಿದ್ಯಾರ್ಥಿ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ವಿಪರ್ಯಾಸ ಎಂದರೆ 500 ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಜೊತೆ ಮಗ ಜಗಳ ಮಾಡಿಕೊಂಡಿದ್ದನಂತೆ. ಇದೇ ಕಾರಣಕ್ಕಾಗಿ ಆತ ಪಿಸ್ತೂಲ್​​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ‌.
ಆರ್‌.ಟಿ.ನಗರ ನಿವಾಸಿ ರಾಹುಲ್ ಭಂಡಾರಿ ತಂದೆ ಬಳಿ 500 ರೂ. ಕೇಳಿದ್ದನಂತೆ.‌ ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದರು. ಇದರಿಂದ ಬೇಸರಗೊಂಡ ರಾಹುಲ್ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಶುಕ್ರವಾರ ಬೆಳಗ್ಗೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ‌ ಮಾಡುತ್ತಿದ್ದ ರಾಹುಲ್ ಪ್ರತಿದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಇದರಂತೆ ಶುಕ್ರವಾರ ಬೆಳಗ್ಗೆ ಎದ್ದು ಕೆಲ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ವೇಳೆ ವಾಕಿಂಗ್ ಮಾಡಲು ಹೊರ ಬಂದಿದ್ದಾನೆ.‌ ಸುಮಾರು 5 ಗಂಟೆ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಎಫ್​​ಎಸ್ಎಲ್ ತಂಡದಿಂದ ಪರಿಶೀಲನೆ:
ಘಟನಾ ಸ್ಥಳಕ್ಕೆ ಎಫ್​​ಎಸ್ಎಲ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ಸಾಕ್ಷ್ಯಾಧಾರ ಕಲೆ ಹಾಕಿದ್ದಾರೆ. ಯುವಕನ ಬ್ಯಾಗ್ ಪರಿಶೀಲಿಸಿದಾಗ ಪ್ರಶ್ನೆ ಪತ್ರಿಕೆ, ಮೆಂಟೋಸ್ ಚಾಕಲೇಟ್ ಹಾಗೂ ಒಂದು ಬುಲೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಂದಿ ಆಯುವವರ ನಡುವೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯ