Webdunia - Bharat's app for daily news and videos

Install App

ಬಿಜಿಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್ಚಾಯ್ತು ಕೋಲ್ಡ್ ವಾರ್..!

Webdunia
ಮಂಗಳವಾರ, 27 ಜೂನ್ 2023 (20:00 IST)
ವಿಧಾನಸಭಾ ಚುನಾವಣೆಯಲ್ಲಿ ಸೋತುಸುಣ್ಣವಾಗಿರುವ ಬಿಜೆಪಿ ಪಕ್ಷ ಹೊಸ ಸಾರಥಿಯ ಹುಡುಕಾಟದಲ್ಲಿರುವ ಟೆನ್ಷನ್ ಒಂದು ಕಡೆ ಮತ್ತೊಂದು ಕಡೆ ಬಣಗಳ ವಾರ್ ಶುರುವಾಗಿದೆ ಎಂದು ಹೇಳಲಾಗ್ತಿದೆ. ಇಷ್ಟುದಿನ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಅಶ್ವಥ್ ನಾರಾಯಣ್, ಸಿಟಿ ರವಿ, ಶೋಭಾ ಕರಂದ್ಲಾಜೆ,ಸುನೀಲ್ ಕುಮಾರ್ ಅನ್ನೋ ಹೆಸರುಗಳು ಕೇಳಿಬರ್ತಿದ್ದೋ. ಇದೀಗ ಈ ರೇಸ್ ಗೆ ವೀರಶೈವ‌ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮಾಜಿ ಸಚಿವ ವಿ.ಸೋಮಣ್ಣ ಬಂದಿದ್ದು ಕೇಸರಿ ಪಡೆಯಲ್ಲಿ ರಾಜ್ಯಾದ್ಯಕ್ಷರ  ಸ್ಥಾನದ ವಾರ್ ನಿಧಾನವಾಗಿ ಶುರುವಾಗ್ತಿದೆ. ಶಿಸ್ತಿನ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದ್ದ ಬಿಜೆಪಿ ಯಲ್ಲಿ ಇದೀಗ ಒಳಬೇಗುದಿ ತಾರಕಕ್ಕೇರಿದ್ದು, ಪಕ್ಷದ  ಮುಖಂಡರು ಬಹಿರಂಗವಾಗಿಯೇ ಆರೋಪ-  ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಸದ್ಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಈಗಾಗಲೇ ಪೂರ್ಣ ಗೊಂಡಿದ್ದು, ಹೊಸಬರ ನೇಮಕ ನಡೆಯಬೇಕಿತ್ತು. ಇದೇ ವೇಳೆ ವಿಧಾನಸಭೆಯಲ್ಲಿ ಆಡಳಿತಾ ರೂಢ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಶಾಸಕಾಂಗ ಪಕ್ಷದ ನಾಯಕನ  ಆಯ್ಕೆಯೂ ಮುಗಿಯಬೇಕಿತ್ತು. ಆದರೆ, ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಇದೀಗ ಬರುವ ಜು.3ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುವುದರಿಂದ ಅಷ್ಟರೊಳಗಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲೇಬೇಕಾಗಿದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕ, ನೂತನ ರಾಜ್ಯಾಧ್ಯಕ್ಷ ಹುದ್ದೆಗೆ ಹೆಚ್ಚ ಕಡಮೆ ಏಕಕಾಲದಲ್ಲೇ ನೇಮಕಗೊಳ್ಳುವ  ಹೆಚ್ಚು ಎಂದು ಹೇಳಲಾಗ್ತಿದೆ.

ಇದು ಕೂಡ ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬರ್ತಾ ಇದೆ.. ಪಕ್ಷದ ಹಾಲಿ  ರಾಜ್ಯಾಧ್ಯಕ್ಷ ನಳಿನ್‌ ಅವಧಿ ಈಗಾಗಲೇ ಮುಗಿದಿದ್ದು, ಹೊಸಬರ ಹುಡುಕಾಟ ನಡೆದಿದೆ. ವಿಪಕ್ಷನಾಯಕ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಆಗಬೇಕಾಗಿದೆ. ಹೀಗಾಗಿ, ಈ ಎರಡೂ ಸ್ಥಾನಗಳಿಗೆ ತಮಗೆ ಬೇಕಾದವರನ್ನು ಆಯ್ಕೆ ಮಾಡಬೇಕು ಅಥವಾ ತಮಗೆ ಬೇಡವಾದವರು ನೇಮಕವಾಗದಂತೆ ತಡೆಯಬೇಕು ಎಂದು ಉದ್ದೇಶದಿಂದ ಅಂತರಿಕ ಜಿದ್ದಾಜಿದ್ದಿ  ಸಹ ಭರದಿಂದ ಮುಂದುವರೆದಿದ್ಯಾ ಎಂಬ ಅನುಮಾನ‌ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments