ಅತೃಪ್ತ ಶಾಸಕರ ಶವಯಾತ್ರೆ ; ಭುಗಿಲೆದ್ದ ಆಕ್ರೋಶ

ಗುರುವಾರ, 11 ಜುಲೈ 2019 (16:26 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡುತ್ತಿರೋದಕ್ಕೆ ಆಕ್ರೋಶ ಹೆಚ್ಚಾಗುತ್ತಿದ್ದು, ಮೈತ್ರಿ ಪಕ್ಷಗಳ ಮುಖಂಡರು ಅತೃಪ್ತರ ಶವಯಾತ್ರೆ ನಡೆಸಿದ್ದಾರೆ.

ಆಕ್ರೋಶಗೊಂಡ ಕಾಂಗ್ರೆಸ್ – ಜೆಡಿಎಸ್ ಮುಖಂಡರು, ರಾಜೀನಾಮೆ ನೀಡಿರೋ ಶಾಸಕರ ಅಣುಕು ಶವಯಾತ್ರೆ ನಡೆಸಿದ್ದಾರೆ. ಘಟನೆ ರಾಮನಗರ ಜಿಲ್ಲೆ‌ ಚನ್ನಪಟ್ಟಣದ FCC ದಲ್ಲಿ ಈ ಘಟನೆ ನಡೆಯಿತು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಈ ವಿನೂತನ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡಿದ ಶಾಸಕರ ಶವಯಾತ್ರೆ ಮೂಲಕ‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾವೇರಿ ವೃತ್ತದಲ್ಲಿ ಶಾಸಕರ ಅಣುಕು ಶವಗಳಿಗೆ ರಾಜೀನಾಮೆ ನೀಡಿದ ಶಾಸಕರ ಭಾವಚಿತ್ರ ಅಂಟಿಸಿ‌ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ  ಪ್ರಜಾತಂತ್ರಕ್ಕೆ ವ್ಯವಸ್ಥೆಗೆ ಶಾಸಕರು ಧಕ್ಕೆ ತರುತ್ತಿದ್ದಾರೆ.

ರಾಜ್ಯದ ಸಮಸ್ಯಗಳಿಗೆ ರಾಜೀನಾಮೆ ನೀಡದ ಶಾಸಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಇಟ್ಟುಕೊಂಡು‌ ರಾಜೀನಾಮೆ ನೀಡಿರುವುದು ಎಷ್ಟು ಸರಿ? ಎಂದು ರಾಜೀನಾಮೆ ನೀಡಿದ ಶಾಸಕ ವಿರುದ್ಧ ಧಿಕ್ಕಾರ ಕೂಗಿದರು. ಇಂಥ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಒತ್ತಾಯ ಮಾಡಿದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಪೀಕರ್ ಮುಂದೆ ಅತೃಪ್ತರು: ಹೆಚ್ಚು ಮಾತನಾಡೋದಿಲ್ಲ ಅಂತ ಖರ್ಗೆ ಗುಡುಗು