ಕರ್ನಾಟಕದಲ್ಲಿ ಮಂಗಳವಾರ (ಜನವರಿ 25) ರಂದು ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಮತ್ತು ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟು ಎಂದು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಇದೆ.
ತಮಿಳುನಾಡಿನಲ್ಲಿ ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್ ಡೌನ್ ಇದೆ. ಆದರೆ, ತಿಂಗಳ ಅಂತ್ಯದವರೆಗೂ ಹಲವು ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಕೆಲವು ಹಣ್ಣು ತರಕಾರಿ ಸಾರಿಗೆ ಸಂಪರ್ಕ ವ್ಯತ್ಯಯ ಉಂಟಾಗಿ, ಬೆಲೆ ವ್ಯತ್ಯಾಸ ಉಂಟಾಗಬಹುದು. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಕೂಳೆ -450-500 , ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450