Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಮಾಡೋ ಹಾಗೆ ಮಾಡ್ಬೇಡಿ: ಸಿಎಂ ಬಿಎಸ್ ವೈ ಮನವಿ

ಲಾಕ್ ಡೌನ್ ಮಾಡೋ ಹಾಗೆ ಮಾಡ್ಬೇಡಿ: ಸಿಎಂ ಬಿಎಸ್ ವೈ ಮನವಿ
ಬೆಂಗಳೂರು , ಸೋಮವಾರ, 15 ಮಾರ್ಚ್ 2021 (10:29 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಎಚ್ಚರಿಕೆ ವಹಿಸುವಂತೆ ಜನತೆಗೆ ಕರೆ ನೀಡಿದ್ದಾರೆ.


ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ರಾಜ್ಯದಲ್ಲೂ ಲಾಕ್ ಡೌನ್ ಭೀತಿ ಎದುರಾಗಿದೆ.

‘ಸಾರ್ವಜನಿಕರು ನಿಯಮ ಪಾಲಿಸದೇ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಾದರೆ ಲಾಕ್ ಡೌನ್ ಅನಿವಾರ್ಯವಾದೀತು. ಹಾಗೆ ಆಗಬಾರದು ಎಂದಾದರೆ ಸಾರ್ವಜನಿಕರು ಹತೋಟಿಯಲ್ಲಿರಬೇಕು’ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ನಿನ್ನೆ 934 ಪ್ರಕರಣಗಳು ಕಂಡುಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ನಾಲ್ಕು ರಾಜ್ಯಗಳ ಚುನಾವಣೆ ಪ್ರತಿಷ್ಠೆಯ ಕಣ