Publish Date: Thu, 13 Jul 2017 (12:41 IST)
Updated Date: Thu, 13 Jul 2017 (12:43 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದ ಹೆಲಿಕಾಪ್ಟರ್ ದಾರಿ ತಪ್ಪಿ ಒಂದು ಕಡೆ ಲ್ಯಾಂಡ್ ಆಗಬೇಕಾಗಿದ್ದುದು, ಇನ್ನೊಂದು ಕಡೆ ಲ್ಯಾಂಡ್ ಆದ ಘಟನೆ ಇಂದು ನಡೆದಿದೆ.
ಕೊಪ್ಪಳದಿಂದ ಬರುತ್ತಿದ್ದ ಸಿಎಂ ಪ್ರಯಾಣಿಸುತ್ತಿದ್ದ ಕಾಪ್ಟರ್ ತೊಂಡಿಹಾಳದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅದರ ಬದಲು 35 ಕಿ.ಮೀ. ದೂರದ ಲಿಂಗಸೂರಿನಲ್ಲಿ ಲ್ಯಾಂಡ್ ಆಗಿದೆ. ಪೈಲಟ್ ಅಚಾತುರ್ಯದಿಂದಾಗಿ ಈ ಘಟನೆ ನಡೆದಿದೆ. 11.15 ಕ್ಕೆ ಲ್ಯಾಂಡ್ ಆಗಬೇಕಿದ್ದ ಕಾಪ್ಟರ್ ಇನ್ನೂ ಬಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ವಿಚಾರಿಸಿದಾಗ ಅಚಾತುರ್ಯದಿಂದಾಗಿ ಲಿಂಗಸೂರಿನಲ್ಲಿ ಲ್ಯಾಂಡ್ ಆಗಿರುವುದು ಬೆಳಕಿಗೆ ಬಂತು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಐಜಿ ರೂಪಾ ಮತ್ತು ಡಿಜಿಪಿ ಸತ್ಯನಾರಾಯಣ ಅವರ ನಡುವಿನ ಕಿತ್ತಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ