Publish Date: Thu, 07 Dec 2017 (08:25 IST)
Updated Date: Thu, 07 Dec 2017 (08:26 IST)
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಪಾನಪ್ರಿಯರಿಗೆ ಖುಷಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಎಣ್ಣೆ ಹೊಡೆಯಲು ವಯೋಮಿತಿ ಫಿಕ್ಸ್ ಮಾಡಿ ಶಾಕ್ ನೀಡಲು ಹೊರಟಿದ್ದಾರೆ.
ಕೇರಳದಲ್ಲಿ ಈಗಾಗಲೇ ಮದ್ಯಪಾನ ಮಾಡುವ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಮದ್ಯಪಾನ ಮಾಡುವವರಿಗೆ ವಯೋಮಿತಿ ಫಿಕ್ಸ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಇದಕ್ಕಾಗಿ ಈಗಾಗಲೇ ಅಬಕಾರಿ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೊಂದು ಖಾಯಿದೆ ಜಾರಿಗೆ ಬಂದರೆ ಇನ್ನು ಮದ್ಯಪಾನಕ್ಕೂ ಕಡಿವಾಣ ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ