Publish Date: Fri, 04 Aug 2017 (11:57 IST)
Updated Date: Fri, 04 Aug 2017 (12:02 IST)
ಬೆಂಗಳೂರು: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸಿಎಂ ಸಿದ್ಧರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
‘ಐಟಿ ದಾಳಿಯೆಲ್ಲಾ ಕೇಂದ್ರ ಸರ್ಕಾರದ ಪಿತೂರಿ. ಬಿಜೆಪಿ ನಾಯಕ ಅನಂತ್ ಕುಮಾರ್ ಮೇಲೆ ಭ್ರಷ್ಟಾಚಾರ ಆರೋಪವಿದೆ. ಬಿಎಸ್ ವೈ ವಿರುದ್ಧವೂ ಅಕ್ರಮ ಆರೋಪವಿದೆ. ಹಾಗಿದ್ದರೂ ಅವರ ವಿರುದ್ಧ ತಪಾಸಣೆ ಯಾಕಿಲ್ಲ?
ಡಿಕೆ ಶಿವಕುಮಾರ್ ಮಾತ್ರ ಯಾಕೆ ರಾಜೀನಾಮೆ ನೀಡಬೇಕು? ಅವರ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗಾರರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.