Publish Date: Tue, 14 Apr 2026 (11:02 IST)
Updated Date: Tue, 14 Apr 2026 (11:04 IST)
ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ಜಯಂತಿ ಪ್ರಯುಕ್ತ ಸಂದೇಶ ನೀಡಿರುವ ಸಿಎಂ ಸಿದ್ದರಾಮಯ್ಯ ಜಾತಿ ಕಂದಾಚಾರವನ್ನು ಹೊಡೆದೋಡಿಸೋಣ ಎಂದು ಕರೆ ನೀಡಿದ್ದಾರೆ.
ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜನ್ಮ ಜಯಂತಿ. ಈ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಸಿಎಂ ಸಿದ್ದರಾಮಯ್ಯ ಬಾಬಾ ಸಾಹೇಬರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣಗೊಳಿಸಿತು ಎಂದಿದ್ದಾರೆ.
ಶತಮಾನಗಳ ಕಾಲ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮುಂತಾದವುಗಳಿಂದ ವಂಚಿತವಾಗಿದ್ದ ಕೋಟ್ಯಂತರ ಶೋಷಿತ ಜನರಿಗೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಘನತೆಯ ಬದುಕನ್ನು ನೀಡಿದ್ದು ಬಾಬಾ ಸಾಹೇಬರ ಸಂವಿಧಾನ.
ಮೌಢ್ಯ, ಕಂದಾಚಾರ, ಜಾತಿಯಾಧಾರಿತ ಅಸಮಾನತೆಗಳೇ ತುಂಬಿಹೋಗಿದ್ದ ಭಾರತೀಯ ಸಮಾಜದಲ್ಲಿ ಪರಿವರ್ತನೆಯ ಯುಗಕ್ಕೆ ಚಾಲನೆ ನೀಡಿದ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಅವರ ಚಿಂತನೆಯ ಅರಿವಿನೊಂದಿಗೆ ಆಚರಿಸೋಣ. ಸಮಸ್ತ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಸಂದೇಶ ನೀಡಿದ್ದಾರೆ.
About Writter
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....