Select Your Language

Notifications

webdunia
webdunia
webdunia
webdunia

ಪುತ್ರನ ನಂತ್ರ ಸುನೀಲ್ ಭೋಸ್‌ಗೂ ಸಾಂವಿಧಾನಿಕ ಹುದ್ದೆ ನೀಡಿದ ಸಿಎಂ ಸಿದ್ದರಾಮಯ್ಯ

ಪುತ್ರನ ನಂತ್ರ ಸುನೀಲ್ ಭೋಸ್‌ಗೂ ಸಾಂವಿಧಾನಿಕ ಹುದ್ದೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 7 ಜುಲೈ 2017 (12:15 IST)
ಸಾಂವಿಧಾನಿಕ ಹುದ್ದೆ ಹೊಂದದೆ ಸರಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವ ಆರೋಪ ಎದುರಿಸುತ್ತಿದ್ದ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಭೋಸ್‌ಗೆ ಸರಕಾರ ಇದೀಗ ಸಾಂವಿಧಾನಿಕ ಹುದ್ದೆ ನೀಡಿದೆ.  
ಕೆಲ ತಿಂಗಳುಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರಿಗೆ ಕೂಡಾ ಸಾಂವಿಧಾನಿಕ ಹುದ್ದೆ ನೀಡಲಾಗಿತ್ತು. ಇದೀಗ ಸುನೀಲ್ ಭೋಸ್‌ಗೆ ಸಾಂವಿಧಾನಿಕ ಹುದ್ದೆ ನೀಡಿ ಆರೋಪಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಸರಕಾರ ಮಾಡಿದೆ.
 
ಯಾವುದೇ ಹುದ್ದೆಯಿಲ್ಲದೇ ಸರಕಾರಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವುದು, ಇತರ ಸರಕಾರಿ ಕಾರ್ಯಕ್ರಮಗಳಲ್ಲಿ ಸುನೀಲ್ ಭೋಸ್ ಪಾಲ್ಗೊಳ್ಳುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
 
ಪುತ್ರ ಸುನೀಲ್ ಭೋಸ್‌ಗೆ ರಾಜಕೀಯ ನೆಲೆ ಒದಗಿಸಲು ಸಚಿವ ಎಚ್.ಸಿ.ಮಹಾದೇವಪ್ಪ ಕಸರತ್ತು ನಡೆಸಿದ್ದಾರೆ ಎನ್ನುವ ವರದಿಗಳು ಹರಡಿದ್ದವು. ಇದೀಗ ಭೋಸ್‌ಗೆ ಸಾಂವಿಧಾನಿಕ ಹುದ್ದೆ ನೀಡಿರುವುದು ಆರೋಪ ಪ್ರತ್ಯಾರೋಪಗಳಿಗೆ ಸರಕಾರ ಅಂತ್ಯಹಾಡಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾಗೆ ಭಾರತದಿಂದ ಖಡಕ್ ಪ್ರತಿಕ್ರಿಯೆ