Select Your Language

Notifications

webdunia
webdunia
webdunia
webdunia

ಚೀನಾಗೆ ಭಾರತದಿಂದ ಖಡಕ್ ಪ್ರತಿಕ್ರಿಯೆ

ಚೀನಾಗೆ ಭಾರತದಿಂದ ಖಡಕ್ ಪ್ರತಿಕ್ರಿಯೆ
ನವದೆಹಲಿ , ಶುಕ್ರವಾರ, 7 ಜುಲೈ 2017 (11:33 IST)
ನವದೆಹಲಿ:ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದಿದ್ದ ಚೀನಾಗೆ ಭಾರತ ಖಡಕ್ ತಿರುಗೇಟು ನೀಡಿದ್ದು,  ಕ್ಸಿ ಜಿನ್'ಪಿಂಗ್ ಜೊತೆಗೆ ದ್ವಿಪಕ್ಷೀಯ ಚರ್ಚೆ ಕೇಳಿದ್ದು ಯಾರು? ಎಂದು ಪ್ರಶ್ನಿಸಿದೆ. 
 
ಇಂದಿನಿಂದ ಹ್ಯಾಮ್ ಬರ್ಗ್ ಜಿ-20 ಶೃಂಗಸಭೆ ನಡೆಯುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಹಾಗೂ ಪ್ರಧಾನಿ ಮೋದಿ ಮುಖಾಮುಖಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಚೀನಾ, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮೋದಿ ಹಾಗೂ ಜಿನ್ ಪಿಂಗ್ ನಡುವೆ ಯಾವುದೇ ರೀತಿಯ ಮಾತುಕತೆ ನಡೆಯುವುದಿಲ್ಲ. ಮಾತುಕತೆಗೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿತ್ತು. 
 
ಇದಕ್ಕೆ ಸಮರ್ಪಕವಾಗು ಉತ್ತರ ನೀಡಿರುವ ಭಾರತ, ಇಷ್ಟಕ್ಕೂ ದ್ವಿಪಕ್ಷೀಯ ಚರ್ಚೆ ಕುರಿತು ಸಭೆ ನಡೆಸಿ ಎಂದು ಯಾರು ಕೇಳಿದರು. ದ್ವಿಪಕ್ಷೀಯ ಸಭೆ ನಡೆಸುವಂತೆ ನಾವು ಚೀನಾವನ್ನು ಕೇಳಿಯೇ ಇಲ್ಲ. ಹೀಗಾಗಿ ಸೂಕ್ತ ವಾತಾವರಣದ ಪ್ರಶ್ನೆಯೇ ಮೂಡುವುದಿಲ್ಲ. ಚೀನಾ ಅಧ್ಯಕ್ಷರೊಂದಿಗೆ ಭಾರತ ಪ್ರತ್ಯೇಕ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾಗೆ ಬಹರತದಿಂದ ಖಡಕ್ ಪ್ರತಿಕ್ರಿಯೆ