Select Your Language

Notifications

webdunia
webdunia
webdunia
webdunia

ಸಿಎಂ ಆಗಿ ಒಬ್ಬ ಸಂಸದನ ಸ್ವಾಗತಕ್ಕೆ ಹೋಗ್ತೀರಾ: ಪ್ರಿಯಾಂಕ ಗಾಂಧಿ ಬರಮಾಡಿಕೊಂಡ ಸಿದ್ದರಾಮಯ್ಯಗೆ ಟಾಂಗ್

Siddaramaiah-Priyanka Vadra

Krishnaveni K

ಬೆಳಗಾವಿ , ಮಂಗಳವಾರ, 21 ಜನವರಿ 2025 (14:09 IST)
ಬೆಳಗಾವಿ: ಇಲ್ಲಿ ನಡೆಯುತ್ತಿರುವ ಗಾಂಧಿ ಭಾರತ ಸಮಾವೇಶದಲ್ಲಿ ಭಾಗಿಯಾಗಲು ಬಂದಿದ್ದ ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾರನ್ನು ಸ್ವಾಗತಿಸಲು ಸ್ವತಃ ಸಿಎಂ ಸಿದ್ದರಾಮಯ್ಯನವರು ತೆರಳಿದ್ದಕ್ಕೆ ನೆಟ್ಟಿಗರು ಟೀಕೆ ಮಾಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಬೃಹತ್ ಸಮಾವೇಶ, ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಬೇಕಿತ್ತು. ಆದರೆ ಅನಾರೋಗ್ಯದಿಂದಾಗಿ ಅವರು ಗೈರಾಗಿದ್ದಾರೆ.

ಅವರ ಬದಲು ಸಹೋದರಿ, ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಭಾಗಿಯದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಿಯಾಂಕ ಗಾಂಧಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮುಂತಾದವರು ಸ್ವಾಗತ ನೀಡಿದ್ದಾರೆ.

ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟಾಂಗ್ ಕೊಟ್ಟಿದ್ದಾರೆ. ಒಬ್ಬ ಸಂಸದೆಯನ್ನು ಸ್ವಾಗತಿಸಲು ಸ್ವತಃ ಸಿಎಂ ಏರ್ ಪೋರ್ಟ್ ಗೆ ಹೋಗಬೇಕೆಂದರೆ ಎಷ್ಟು ಸ್ವಾಭಿಮಾನ ಇರಬೇಕು ಇವರಿಗೆ? ಎಂದು ಒಬ್ಬರು ಕಾಲೆಳೆದರೆ ಮತ್ತೊಬ್ಬರು ಅಂತೂ  ಸ್ವಾಗತಕಾರನ ಕೆಲಸ ಚೆನ್ನಾಗಿ ಮಾಡಿದಿರಿ ಎಂದು ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಕಾಂಗ್ರೆಸ್ ಸಮಾವೇಶಕ್ಕೆ ರಾಹುಲ್ ಗಾಂಧಿ ಬರ್ತಾರೆಂದು ಕಾದಿದ್ದೇ ಬಂತು: ಗೈರಾಗಲು ಕಾರಣವೇನು