Photo Courtesy Facebook
ಮೈಸೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ರಂಗೇರುತ್ತಿದ್ದು, ಜೆಡಿಎಸ್– ಬಿಜೆಪಿ ಮೈತ್ರಿಯಾಗಿ ಕಾಂಗ್ರೆಸ್‌ನ್ನು ಮಣಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಇನ್ನೂ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಇತ್ತ ಕಾಂಗ್ರೆಸ್‌ನಿಂದ ರಾಜವಂಶಸ್ಥನ ವಿರುದ್ಧ ಸ್ಪರ್ಧಿಸುವುದು ಯಾರೆಂದು ಇನ್ನೂ ಫೈನಲ್ ಆಗಿಲ್ಲ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಯದುವೀರ ವಿರುದ್ಧ ಟೀಕೆಗಳನ್ನು ನೀಡಬಾರೆಂದು ಕೈ ನಾಯಕರಿಗೆ ತಿಳಿ ಹೇಳಿದ್ದಾರೆ.
ಯದುವೀರ ವಿರುದ್ಧ ತುಟಿ ಬಿಚ್ಚದಂತೆ ಕೈ ನಾಯಕರಿಗೆ ಸಿಎಂ ಕಿವಿಮಾತು: ಪ್ರಚಾರದ ವೇಳೆ ಅಥವಾ ಮಾಧ್ಯಮಗಳ ಮುಂದೆ ಮಾತನಾಡುವದಾಗ ಯದುವೀರ ಅವರನ್ನು ಯಾವುದೇ ಕಾರಣಕ್ಕೂ ಟೀಕಿಸಲು ಮುಂದಾಗಬೇಡಿ. ಯದುವಂಶದ ವಿಚಾರ ಮೈಸೂರು ಭಾಗದಲ್ಲಿ ಭಾವನಾತ್ಮಕವಾಗಿದೆ. ನಾವು ನೀಡಿದ ಹೇಳಿಕೆಯೇ ನಮಗೆ ಮುಳ್ಳಾಗುವ ಸಾಧ್ಯತೆಯಿದೆ ಎಂದು ಕಿವಿ ಮಾತು ಹೇಳಿದ್ದಾರೆ.
ಬಿಜೆಪಿ ಹೇಳಿರುವ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ನಮಗೆ ಆಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮುಖಂಡರಿಗೆ ಸಿಎಂ ತಿಳಿದ್ದಾರೆ.