Select Your Language

Notifications

webdunia
webdunia
webdunia
webdunia

ದಿಢೀರನೆ ರಾಜ್ಯದ ಸಾಲದ ಬಗ್ಗೆ ಅಂಕಿಅಂಶ ನೀಡಿದ ಸಿಎಂ ಸಿದ್ದರಾಮಯ್ಯ

Chief Minister Siddaramaiah,  Karnataka State Government Loan, Karnataka Legislative Council,

Sampriya

ಬೆಂಗಳೂರು , ಗುರುವಾರ, 12 ಡಿಸೆಂಬರ್ 2024 (18:02 IST)
ಬೆಂಗಳೂರು: 2023-24ರ ಅವಧಿಯಲ್ಲಿ ನಮ್ಮದು ಒಟ್ಟು ಸಾಲ ₹90,280 ಕೋಟಿ ಆಗಿತ್ತು. 2024-25ರಲ್ಲಿ ನಮ್ಮ ಸಾಲ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ. ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಸಾಲದ ಪ್ರಮಾಣ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಅಂಕಿಅಂಶ ಸಮೇತ ಪ್ರತಿಕ್ರಿಯಿಸಿದರು.

ಯಾವುದೇ ಸರ್ಕಾರ ಕೂಡ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಾಲ ಮಾಡಬೇಕಾಗುತ್ತದೆ. ಸಾಮರ್ಥ್ಯ ನೋಡಿಯೇ ಸಾಲ ಪಡೆಯುತ್ತೇವೆ.

ನಿಯಮದ ಪ್ರಕಾರ 3 ಮಾನದಂಡ ನಿಗದಿಯಾಗಿದೆ. ನಮ್ಮಲ್ಲಿ ವಿತ್ತೀಯ ಕೊರತೆಯು2024-25ರಲ್ಲಿ 2.9% ಇದೆ, 2023-24ರಲ್ಲಿ 2.6% ಇತ್ತು ಎಂದು ತಿಳಿಸಿದರು.

2023-24 ರಲ್ಲಿ ನಮ್ಮದು ಒಟ್ಟು ಸಾಲ 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. ಆಂಧ್ರ, ಅಸ್ಸಾಂ, ಹಿಮಾಲಯ ಪ್ರದೇಶ, ಕೇರಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು ಸೇರಿ ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ಸಾಲದ ಪ್ರಮಾಣ ಕಡಿಮೆ ಎಂದು ಸಿಎಂ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ನಡೆ ಹೊಗಳಿ, ಸೋನಿಯಾ ಗಾಂಧಿಯನ್ನು ಟೀಕಿಸಿದ ಎಚ್ ವಿಶ್ವನಾಥ್, ಕಾರಣವೇನು