Select Your Language

Notifications

webdunia
webdunia
webdunia
मंगलवार, 24 दिसंबर 2024
webdunia

ಸಿ.ಎಂ. ಸಿದ್ದರಾಮಯ್ಯ ಆಪ್ತ ಕೆಂಪರಾಜು ಅವರ ಪುತ್ರನ ಗೂಂಡಾಗಿರಿ

ಸಿ.ಎಂ. ಸಿದ್ದರಾಮಯ್ಯ ಆಪ್ತ ಕೆಂಪರಾಜು ಅವರ ಪುತ್ರನ ಗೂಂಡಾಗಿರಿ
ಚಿಕ್ಕಮಗಳೂರು , ಗುರುವಾರ, 7 ಡಿಸೆಂಬರ್ 2017 (09:24 IST)
ಚಿಕ್ಕಮಗಳೂರು: ಸಿ.ಎಂ. ಸಿದ್ದರಾಮಯ್ಯ ಅವರ ಆಪ್ತ ಕೆಂಪರಾಜು ಅವರ ಪುತ್ರ ಭರತ್, ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನ  ಎನ್.ಎಮ್.ಸಿ. ವೃತ್ತದ ಬಳಿ ನಡೆದಿದೆ.


ಚಿಕ್ಕಮಗಳೂರು ಜಿ.ಪಂ.ನ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಅವರ ಪುತ್ರ ಭರತ್ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ. ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಮುಗಿಸಿ ವಾಪಸು ಬರುವಾಗ ಬಸ್ ಚಾಲಕ ಅಡ್ಡ ಬಂದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಪ್ರಕರಣ ಚಿಕ್ಕಮಂಗಳೂರು ನಗರದ ಪೋಲಿಸ್ ಠಾಣೆಗೆ ಹೋದಾಗ ಅಲ್ಲಿನ ಎಸ್.ಐ.ರಘು ಅವರು ಪ್ರಕರಣ ದಾಖಲು ಮಾಡದೆ ರಾಜಿ ಮಾಡಿ ಬಿಟ್ಟು ಕಳುಹಿಸಿದರು. ಇದರಿಂದ ಎಸ್.ಐ.ರಘು ಅವರ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಗೆ ಇಕ್ಕಟ್ಟಿನ ಪ್ರಶ್ನೆ ಕೇಳಿದ ನಿರ್ಮಲಾನಂದ ಸ್ವಾಮೀಜಿ!