Publish Date: Sun, 18 Jun 2023 (07:09 IST)
Updated Date: Sun, 18 Jun 2023 (09:11 IST)
ರಾಯಚೂರು : ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್ಸುಖ್ ಎಲ್. ಮಾಂಡವೀಯ ಗೆ ಪತ್ರ ಬರೆದಿದ್ದು, ಮಹತ್ವಾಕಾಂಕ್ಷೆ ಜಿಲ್ಲೆಯಾದ ರಾಯಚೂರು ಏಮ್ಸ್ ನೀಡಲು ಸೂಕ್ತ ಜಿಲ್ಲೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ.