Publish Date: Fri, 21 Jun 2024 (10:06 IST)
Updated Date: Fri, 21 Jun 2024 (10:11 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದರು.
ಬಳ್ಳಾರಿಯ JSW ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ಯೋಗದಿನದಲ್ಲಿ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಈ.ತುಕಾರಾಂ, ಸರ್ಕಾರದ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ನಟಿ ಶ್ರೀಲೀಲಾ, ವಚನಾನಂದ ಸ್ವಾಮೀಜಿ, ಶಾಸಕ ಶ್ರೀನಿವಾಸ್, KMF ಅಧ್ಯಕ್ಷ ಭೀಮಾನಾಯ್ಕ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಕೂಡಾ ಆಗಮಿಸಿದ್ದರು. ವೇದಿಕೆಗೆ ಸಿಎಂ ಬರುತ್ತಿದ್ದಂತೇ ಸಂಗಡಿಗರು ಶ್ರೀಲೀಲಾರನ್ನು ಸಿದ್ದರಾಮಯ್ಯಗೆ ಪರಿಚಯಿಸಿದರು. ಈ ವೇಳೆ ಅವರ ತಾಯಿ ಕೂಡಾ ಜೊತೆಗಿದ್ದರು. ಶ್ರೀಲೀಲಾ ಜೊತೆ ಮಾತನಾಡಿದ ಸಿಎಂ ಬಳಿಕ ವೇದಿಕೆಯೇರಿದರು.
ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ, ಶ್ರೀಲೀಲಾ ವೇದಿಕೆಯಲ್ಲಿ ಕುಳಿತು ಸರಳವಾದ ಯೋಗಾಸನಗಳನ್ನು ಮಾಡಿ ಯೋಗ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದ ಬಳಿಕ ಅತಿಥಿಗಳನ್ನು ಸನ್ಮಾನಿಸಲಾಯಿತು.