ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನ ಅಂಗವಾಗಿ ಅವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದ್ರು.ದಿವಂಗತ ಜವಾಹರಲಾಲ್ ನೆಹರು ಅವರ 134ನೇ ಜನ್ಮದಿನವನ್ನ ಸಿಎಂ ಸಿದ್ದರಾಮಯ್ಯ ಸ್ಮರಿಸಿದ್ರು.
ನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಂದು ನೆಹರು ಅವರ ಜನ್ಮದಿನಾಚರಣೆ.ಇದೇ ದೇಶ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡ್ತಿದ್ದಾರೆ.ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆ ಆಗಿ ಆಚರಣೆ ಮಾಡುತ್ತಿದ್ದೇವೆ.ಮಕ್ಕಳ ಮೇಲೆ ಬಹಳ ಪ್ರೀತಿಯನ್ನು ನೆಹರು ಹೊಂದಿದ್ದವರು .ನೆಹರು ಈ ದೇಶ ಕಂಡ ಅಗ್ರಗಣ್ಯ ವ್ಯಕ್ತಿಗಳಲ್ಲಿ ಒಬ್ಬರು.ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದವರು.
9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ರು.ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದವರು.ಅಧಿವೇಶನದಲ್ಲಿ ಯಾವತ್ತು ಕೂಡ ತಪ್ಪಿಸಿಕೊಂಡವರು ಅಲ್ಲ.ಯಾವತ್ತು ಕೂಡ ವಿರೋಧ ಪಕ್ಷದವರು ಮಾತಿಗೆ ಬೇಸರಗೊಂಡವರು ಅಲ್ಲ.ಇಡೀ ದೇಶದಲ್ಲಿ ಒಗ್ಗಟ್ಟು ಕಾಪಡಲು ನೆಹರು ಕಾರಣರಾದ್ರು.ಅದೇ ದಿಕ್ಕಿನಲ್ಲಿ ದೇಶವನ್ನು ಮುನ್ನಡಿಸಿದ್ರು.ಅವರ ಮೌಲ್ಯಗಳನ್ನು ನಾವು ಅನುಸಿರಿಸಬೇಕು ಎಂದು ಹೇಳಿದ್ರು.