Select Your Language

Notifications

webdunia
webdunia
webdunia
webdunia

ತಾನು ಕಲಿತ ಶಾಲೆಯಲ್ಲೇ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ

ತಾನು ಕಲಿತ ಶಾಲೆಯಲ್ಲೇ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2017 (20:30 IST)
ಸಿಎಂ ಸಿದ್ದರಾಮಯ್ಯ ಇಂದು ತಾವು ಕಲಿತ ಶಾಲೆಯಲ್ಲಿಯೇ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಕಲಿಸಿ ಸಂತಸಪಟ್ಟರು.
ಮೈಸೂರು ಸಮೀಪದ ಕಪ್ಪೆಗಾಲ ಶಾಲೆಗೆ ಭೇಟಿ ನೀಡಿದ ಸಿಎಂ ಸಿದ್ರಾಮಯ್ಯ, ಮಕ್ಕಳೇ ಸ್ವರಗಳು ಎಷ್ಟು ವ್ಯಂಜನಗಳು ಎಷ್ಟು ಎಂದು ವ್ಯಾಕರಣದ ಬಗ್ಗೆ ಪ್ರಶ್ನೆಗಳನ್ನು ಎಂದು ಮಕ್ಕಳನ್ನು ಕೇಳಿದಾಗ ಮಕ್ಕಳು ಉತ್ತರ ನೀಡಿದ್ದರಿಂದ ಶಹಬ್ಬಾಸ್ ಎಂದು ಪ್ರಶಂಸಿದರು.
 
 ವರ್ಗೀಯ ವ್ಯಂಜನ, ಅನುನಾಸಿಕ ಎಂದರೇನು ಎಂದು ಎರಡನೇ ಪ್ರಶ್ನೆ ಹಾಕಿದರು. ಎರಡನೇ ಪ್ರಶ್ನೆಗೂ ಮಕ್ಕಳು ಉತ್ತರ ನೀಡಿದಾಗ ಸಂತೃಪ್ತಿ ವ್ಯಕ್ತಪಡಿಸಿ. ಕಷ್ಟುಪಟ್ಟು ಓದಿ ದೊಡ್ಡವರಾಗಿ ತಂದೆ ತಾಯಿಗೆ, ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಎಂದು ಸಲಹೆ ನೀಡಿದರು.
 
ಇಲ್ಲಿನ ಮಕ್ಕಳಿಗೆ ವ್ಯಾಕರಣದ ಬಗ್ಗೆ ಗೊತ್ತಿದೆ, ಆದರೆ, ವಿಧಾನಸೌಧದಲ್ಲಿ ಕೆಲವರಿಗೆ ಸಂಧಿ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಪಸಂಖ್ಯಾತಳಾಗಿದ್ದರಿಂದ ಚುನಾವಣೆಯಲ್ಲಿ ಸೋಲನುಭವಿಸಿದೆ: ಮಮತಾ