ಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ಪ್ರಯಾಣಿಸಿ ಹೈಕಮಾಂಡ್ ನಾಯಕರ ಜೊತೆ ಮೂರು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕರ್ನಾಟಕ ಚುನಾವಣೆಯಲ್ಲಿ 150+ ಸ್ಥಾನವನ್ನು ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ ಈಗ ಮೂರು ವಿಷಯಗಳು ತಲೆನೋವನ್ನು ತಂದಿಟ್ಟಿದೆ. ಚುನಾವಣೆ ತಿಂಗಳು ಹತ್ತಿರ ಬರುತ್ತಿದ್ದಂತೆ ಯಾವುದೇ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕಾರಣಕ್ಕೆ ಈ ಭೇಟಿ ಈಗ ಮಹತ್ವ ಪಡೆದಿದೆ.
ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಮರಳಿ ಸಚಿವ ಸ್ಥಾನ ಕೊಡಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿಲುವು ಕೇಳಲಿದ್ದಾರೆ. ಇದರ ಜೊತೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಸಿಎಂ ವಿವರ ನೀಡಲಿದ್ದಾರೆ.