ಬೆಂಗಳೂರು: ಪ್ರಕೃತಿ ಮುನಿದರೆ ಮನುಷ್ಯ ಶರಣಾಗಲೇ ಬೇಕು. ಅಂತಹದ್ದೊಂದು ಗಳಿಗೆ 2004 ರಲ್ಲಿ ನಡೆದಿತ್ತು. ಭೀಕರ ಸುನಾಮಿ ಅಪ್ಪಳಿಸಿದ್ದು ಇದೇ ದಿನ.
2004 ರ ಡಿಸೆಂಬರ್ 26 ರಂದು ತಮಿಳು ನಾಡು, ಕನ್ಯಾಕುಮಾರಿ ತೀರ ಪ್ರದೇಶಕ್ಕೆ ಸುನಾಮಿ ಅಪ್ಪಳಿಸಿತ್ತು. ಇಂಡೋನೇಷ್ಯಾದಲ್ಲಿ ಸಮುದ್ರದಾಳದಲ್ಲಿ ಆದ ಭೂಕಂಪನದ ಪರಿಣಾಮ ಸುನಾಮಿ ಎದ್ದಿತ್ತು. ಬಳಿಕ ತಮಿಳುನಾಡು, ಲಕ್ಷದ್ವೀಪ, ಕನ್ಯಾಕುಮಾರಿ ಸೇರಿದಂತೆ ತೀರ ಪ್ರದೇಶದಲ್ಲಿ ಭೀಕರ ಗಾತ್ರದ ಅಲೆಗಳು ಜನ, ಜೀವನವನ್ನು ನುಂಗಿ ಹಾಕಿತ್ತು.
ದೈತ್ಯ ಗಾತ್ರದ ಅಲೆಗಳು ಭೂ ಪ್ರದೇಶವನ್ನು ನುಂಗಿ ಹಾಕಿತ್ತು. 2.5 ಲಕ್ಷಕ್ಕೂ ಅಧಿಕ ಮಂದಿ ಈ ಭೀಕರ ಸುನಾಮಿಗೆ ಸಾವನ್ನಪ್ಪಿದ್ದರು. ಈ ಭೀಕರ ಗಳಿಗೆ ಸಂಭವಿಸಿ ಇಂದಿಗೆ 18 ವರ್ಷಗಳಾಗಿವೆ. ಇಂದಿಗೂ ಜನ ಈ ಭೀಕರ ದಿನವನ್ನು ಮರೆತಿಲ್ಲ.