Publish Date: Thu, 13 Jul 2017 (12:47 IST)
Updated Date: Thu, 13 Jul 2017 (13:07 IST)
ಸಿಎಂ ಸಿದ್ದರಾಮಯ್ಯ ಪ್ರೀತಿ ಪಾತ್ರರೇ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮಾಡಿದ್ದು ಎಂದು ಸಂಸದ ಪ್ರತಾಪ್ ಸಿಂಹ್ ಗಂಭೀರ ಆರೋಪ ಮಾಡಿದ್ದಾರೆ.
ಸ್ವಚ್ಚತಾ ಅಭಿಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರತ್ ಮಡಿವಾಳ ನಮ್ಮ ಕಾರ್ಯಕರ್ತ. ಆತನನ್ನು ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಿ ಶಾಂತಿವ್ಯವಸ್ಥೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಿಂದು ಸಂಘಟನೆಗಳಿಗೆ ಮಾತ್ರ ಎಚ್ಚರಿಕೆ ನೀಡುತ್ತಾರೆ. ಮುಸ್ಲಿಂ ಸಂಘಟನೆಗಳಿಗೆ ಯಾಕೆ ಎಚ್ಚರಿಕೆ ನೀಡುವುದಿಲ್ಲ? ವೋಟ್ ಬ್ಯಾಂಕ್ ಕಳೆದುಹೋಗುತ್ತದೆ ಎನ್ನುವ ಆತಂಕ ಕಾಡುತ್ತಿದೆಯಾ ಎಂದು ಲೇವಡಿ ಮಾಡಿದ್ದಾರೆ.
ಮುಂದಿನ 10 ತಿಂಗಳ ಅವಧಿಯಲ್ಲಾದರೂ ಕರ್ನಾಟಕದ ಸಿಎಂ ಎನ್ನುವಂತೆ ಕಾರ್ಯನಿರ್ವಹಿಸಿ, ಒಳ್ಳೆಯ ಅಡಳಿತ ನಡೆಸಿ ಕಾನೂನು ವ್ಯವಸ್ಥೆಗೆ ಚುರುಕು ಮುಟ್ಟಿಸಿ. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ್ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.