Select Your Language

Notifications

webdunia
webdunia
webdunia
Sunday, 6 April 2025
webdunia

ಪೌರಕಮಿಕರ ಪ್ರತಿಭಟನೆ ಸಿಎಂ ತುರ್ತು ಸಭೆ

Cm
ಬೆಂಗಳೂರು , ಶುಕ್ರವಾರ, 1 ಜುಲೈ 2022 (14:25 IST)
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗರ ಸೇರಿದಂತೆ ಕರ್ನಾಟಕದ ವಿವಿಧೆಡೆ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರಿ ಕಾಯಮಾತಿಗೆ ಒತ್ತಾಯಿಸುತ್ತಿರುವ ಅವರು, ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
 
ಬೆಂಗಳೂರು ನಗರ ಹಾಗೂ ರಾಜ್ಯಾದ್ಯಂತ ನೇರವೇತನ ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು. ಬೆಂಗಳೂರು ನಗರದಲ್ಲಿ ಮೇಲ್ವಿಚಾರಕರನ್ನು (ಮೇಸ್ತ್ರಿ) ಕಾಯಂ ಮಾಡಬೇಕು. ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಕಾಯಂ ಮಾಡಬೇಕು ದಿವಂಗತ ಐಡಿಪಿ ಸಾಲಪ್ಪ ಅವರ ವರದಿಯನ್ನು ಜಾರಿಗೆ ತರಬೇಕು. ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಸವರಾಜ ಬೊಮ್ಮಾಯಿಂದ ಟ್ರೀಪಾರ್ಕ್ ಉದ್ಘಾಟನೆ..