Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ- ಯಡಿಯೂರಪ್ಪರನ್ನು ಎರೆಹುಳದ ಜೊತೆ ಹೋಲಿಸಿ ಕೆಲಸ ಕಳೆದುಕೊಂಡ ಶಿಕ್ಷಕ

ಸಿಎಂ ಕುಮಾರಸ್ವಾಮಿ
ಬೆಂಗಳೂರು , ಶನಿವಾರ, 30 ಮಾರ್ಚ್ 2019 (14:09 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಎರೆಹುಳದ ಜೊತೆ ಹೋಲಿಕೆ ಮಾಡಿದ ಆಂಗ್ಲ ಮಾಧ್ಯಮ ಹೈಸ್ಕೂಲ್  ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.


ಬೆಂಗಳೂರಿನ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಹೈಸ್ಕೂಲ್ ಶಾಲೆಯಲ್ಲಿ ಶಿಕ್ಷಕನೊಬ್ಬ  ಎಂಟನೇ ತರಗತಿಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ  ರೈತ ಮಿತ್ರ ಯಾರು?  ಎಂದು ಪ್ರಶ್ನೆ ಕೇಳಿ ಈ ಪ್ರಶ್ನೆಗೆ ಆಯ್ಕೆಯ ಉತ್ತರಗಳಾಗಿ ಕುಮಾರ ಸ್ವಾಮಿ, ಬಿ.ಎಸ್. ಯಡ್ಡಿಯೂರಪ್ಪ ಹಾಗೂ ಎರೆಹುಳ ಎಂದು ಉತ್ತರ ನೀಡಿದ್ದರು.


ಈ ಪ್ರಶ್ನೆಗೆ ಉತ್ತರಿಸಲು  ಎಂಟನೇ ತರಗತಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಲ್ಲದೇ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಪ್ರಶ್ನೆ ಪತ್ರಿಕೆಯನ್ನ ಸಿದ್ದಪಡಿಸಿದ ಶಿಕ್ಷಕನನ್ನ ಶಾಲೆಯ ಪ್ರಾಂಶುಪಾಲರು ಸೇವೆಯಿಂದ ವಜಾಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷಣಕ್ಕೊಂದು ಮಾತನಾಡುವ ಸುಭಾಷ್ ರಾಠೋಡ ಅವಕಾಶವಾದಿ ರಾಜಕಾರಣಿ-ಉಮೇಶ್ ಜಾಧವ್ ಕಿಡಿ