ಒಂದು ದಿನ ಮೊದಲೇ ದೆಹಲಿಗೆ ಸಿಎಂ ಕುಮಾರಸ್ವಾಮಿ ಹೋಗಿದ್ದು ಯಾಕೆ ಗೊತ್ತಾ?!

ಮಂಗಳವಾರ, 17 ಜುಲೈ 2018 (09:31 IST)
ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ಸಂಸದರ ಸಭೆಗೆ ಸಿಎಂ ಕುಮಾರಸ್ವಾಮಿ ಇಂದೇ ದೆಹಲಿಗೆ ಪ್ರಯಾಣಿಸಲಿದ್ದಾರೆ. ನಾಳೆ ಸಭೆ ನಡೆಯುವುದಿದ್ದರೆ ಇಂದೇ ಏಕೆ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.

ಆಷಾಢ ಮುಗಿದ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಮಾಡಬೇಕಿದೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯಾರಿಗೂ ನೋವಾಗದಂತೆ ನಾಜೂಕಾಗಿ ಕೆಲಸ ನಿರ್ವಹಿಸಬೇಕಾಗಿದೆ.

ಹೀಗಾಗಿ ರಾಹುಲ್ ಗಾಂಧಿ ಜತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಉಂಟಾದ ಅಸಮಾಧಾನಗಳು ಮತ್ತೆ ಆಗದಂತೆ ತಡೆಯಲು ರಾಹುಲ್ ಜತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ದೆಹಲಿಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಿಲಯನ್ಸ್ ಜಿಯೋ ಫೋನ್ ಗಳು ತಯಾರಾಗುವುದು ಎಲ್ಲಿ ಗೊತ್ತಾ?