ಹುಬ್ಬಳ್ಳಿ: ಸಮಾಜವಾದಿ ತತ್ವ ಸಿದ್ದಾಂತ ಒಪ್ಪಿಕೊಳ್ಳುವವರು ದುಬಾರಿ ವಾಚ್ ಕಟ್ಟಿಕೊಳ್ಳಬಾರದು ಎನ್ನುವ ನಿಯಮವೇನಾದರೂ ಇದೆಯೇ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಶ್ರೀನಿವಾಸ ಪ್ರಸಾದ್ ಅವರನ್ನು ಪ್ರಶ್ನಿಸಿದ್ದಾರೆ.
ನರಕ್ಕಾಗಮಿಸಿದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ತತ್ವ ಸಿದ್ದಾಂತ ನಂಬಿ ರಾಜಕೀಯ ಮಾಡುತ್ತಿರುವವರು. ಸಮಾಜವಾದಿ ಅಂತ ದುಬಾರಿ ವಾಚ್ ಕಟ್ಟ ಬಾರದು ಎನ್ನುವ ನಿಯಮವೆಲ್ಲೂ ಇಲ್ಲ. ವಾಚ್ ಜೊತೆಗೆ ಉತ್ತಮ ಗುಣಮಟ್ಟದ ಬಟ್ಟೆಯನ್ನು ಸಹ ಧರಿಸಬಹುದು. ಇದ್ಯಾವುದನ್ನು ಮಾಡಬಾರದು ಎನ್ನುವ ನಿಯಮ ಸಮಾಜವಾದದಲ್ಲಿ ಇದ್ದರೆ ಶ್ರೀನಿವಾಸ ಪ್ರಸಾದ ತಿಳಿಸಲಿ ಎಂದು ಸವಾಲ್ ಹಾಕಿದರು.
ಯಾರು ಯಾರಿಗೆ ಗಿಫ್ಟ್ ಕೊಡಲ್ಲ. ಅದರಲ್ಲೂ ಮುಖ್ಯಮಂತ್ರಿಯಾದವರಿಗೆ ಅವೆಲ್ಕ ಸಾಮಾನ್ಯ. ಅಲ್ಲದೆ ಆ ವಾಚ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಅದೊಂದು ಮುಗಿದ ಅಧ್ಯಾಯ. ಹೀಗಿದ್ದಾಗ ಅದನ್ನೇ ಹೇಳುತ್ತ ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.