Daily Horoscope

Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

Ashwath Narayan
ಬೆಂಗಳೂರು: ಮುಖ್ಯಮಂತ್ರಿಯವರು ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆಗೆ ವಿರುದ್ಧವಾಗಿ ಮಾತಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದೆ ಕಾಂಗ್ರೆಸ್ಸಿನವರು ಎಸ್.ಐ.ಆರ್ ಗೆ ನಾವೆಲ್ಲ ಸಹಕಾರ ಕೊಡಬೇಕು ಎಂದು ಪಕ್ಷದ ಅಧ್ಯಕ್ಷರಾಗಿ ಸಭೆ ಕರೆದು ತಿಳಿಸಿದ್ದರು. ಆ ಎಸ್.ಐ.ಆರ್ ಸಭೆಗೆ ಕೆಲವರು ಬರದಿದ್ದಾಗ ಅಂಥ ಪದಾಧಿಕಾರಿಗಳನ್ನೆಲ್ಲ ಅಮಾನತು ಮಾಡಿದ್ದರು. ಇದೀಗ  ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಎಸ್.ಐ.ಆರ್ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಹೋರಾಟ ಪ್ರಾರಂಭ ಮಾಡಿ ಕರೆ ಕೊಟ್ಟಮೇಲೆ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಒಂದು ರೀತಿ ರಿವರ್ಸ್ ಆಗಿದ್ದಾರೆ. ಅದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಚುನಾವಣಾ ಆಯುಕ್ತರ ಕಚೇರಿ ಮುಂದೆ ನಾಲ್ಕು ಗಂಟೆಗಳ ಕಾಲ ಹೋಗಿ ಪ್ರತಿಭಟನೆ, ಧರಣಿ ಮಾಡಿದ್ದನ್ನು ಖಂಡಿಸಿದರು.
ಎಸ್.ಐ.ಆರ್ ಪ್ರಕ್ರಿಯೆ ಹೊಸದೇನಲ್ಲ, ನರೇಂದ್ರ ಮೋದಿಜೀ, ಅಮಿತ್ ಶಾ ಅವರು ಬಂದಮೇಲೆ ಇದನ್ನು ಪ್ರಾರಂಭಿಸಿಲ್ಲ.  1954 ರಿಂದ ಇಲ್ಲಿಯವರೆಗೂ ಸುಮಾರು 12 ಬಾರಿ ಈ ತರಹದ ಎಸ್.ಐ.ಆರ್ ಪ್ರಕ್ರಿಯೆಗಳು ಇಡೀ ದೇಶದಲ್ಲಿ ನಡೆದಿದೆ. ನೆಹರು, ಇಂದಿರಾಗಾಂಧಿಯವರ ಕಾಲದಲ್ಲಿ ಎರಡು ಬಾರಿ ಆಗಿದೆ   ಎಂದು ವಿವರಿಸಿದರು.

ಇಂದಿರಾಗಾಂಧಿಯವರು ಮಾಡಿದಾಗ ಇವರಿಗೇನೂ ಅನ್ನಿಸಲಿಲ್ಲ, ಎಲ್ಲವೂ ಸರಿ ಇತ್ತು. ನೆಹರು ಕಾಲದಲ್ಲಿ ಆದಾಗಲೂ ಎಲ್ಲವೂ ಸರಿ ಇತ್ತು. ಇದೀಗ ಇಂಡಿ ಒಕ್ಕೂಟದವರು ಪೂರ್ವಗ್ರಹ ಪೀಡಿತರಾಗಿ ದೇಶಾದ್ಯಂತ ಇದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್ ಅವರು ಈ ರಾಜ್ಯದಲ್ಲಿ ಇಲ್ಲಿ ವಿರೋಧ ಮಾಡ್ತಾರೆ. ಕೇರಳದಲ್ಲಿ ಇದು ಎಸ್.ಐ.ಆರ್ ಪ್ರಕ್ರಿಯೆ ಆಗಿದ್ದರಿಂದ ನಾವು ಗೆದ್ದೆವು ಅಂತ
ಕಾಂಗ್ರೆಸ್ಸಿಗರೇ ಎಸ್.ಐ.ಆರ್ ಪ್ರಕ್ರಿಯೆಯನ್ನು ಸ್ವಾಗತ ಮಾಡಿದ್ದಾಗಿ ಗಮನ ಸೆಳೆದರು.

ಇಂದಿರಾಗಾಂಧಿ, ರಾಜೀವ್ ಗಾಂಧಿಯವರಿಗೆ ಆಡಳಿತ ವಿರೋಧಿ ಅಲೆಯ ಸಮಸ್ಯೆ ಆಗಿತ್ತು. ಆದರೆ, ನರೇಂದ್ರಮೋದಿಯವರಿಗೆ ಆಡಳಿತ ವಿರೋಧಿ ಅಲೆ ಏನಿಲ್ಲ, ಗೆದ್ದು ಗೆದ್ದು ಗೆದ್ದು ಗೆದ್ದು ಬರುತ್ತಿದ್ದಾರೆ ಎಂಬ ಮಾತುಗಳನ್ನು ಬಾಲಿಶತನದಲ್ಲಿ ರಾಹುಲ್ ಗಾಂಧಿಯವರು ಆಡುತ್ತಿದ್ದಾರೆ ಎಂದು ಟೀಕಿಸಿದರು. ರಾಹುಲ್ ಗಾಂಧಿ ಅವರು ರಾಜಕೀಯದಲ್ಲಿ ಇನ್ನೂ ಎಳಸು ರಾಜಕಾರಣಿ ರೀತಿ ಮಾತನಾಡುತ್ತಾರೆ. ಅವರಿಗೆ ವಸ್ತು ಸ್ಥಿತಿ ಏನು ಅನ್ನೋದು ಅರ್ಥನೇ ಆಗಿಲ್ಲ. ಇದು ದುರ್ದೈವ  ಎಂದರು.

ಅವರಿಗೆ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ, ಸಿಬಿಐ, ಇ.ಡಿ ಬಗ್ಗೆ ನಂಬಿಕೆ ಇಲ್ಲ, ಇನ್ಕಮ್ ಟ್ಯಾಕ್ಸ್, ಜಿ.ಎಸ್.ಟಿ ಕೌನ್ಸಿಲ್ ಬಗ್ಗೆ ನಂಬಿಕೆ ಇಲ್ಲ, ಈ ರೀತಿ ಪ್ರತಿಯೊಂದು ವಿಷಯದಲ್ಲೂ ಅನುಮಾನದಲ್ಲಿ ನೋಡುತ್ತಾರೆ. ತದ್ವಿರುದ್ಧವಾಗಿ ಮಾತಾಡುತ್ತಾರೆ ಎಂದು ದೂರಿದರು. ನಮ್ಮ ದೇಶ ಮುಂದೆ ಬರುವುದು ಕಾಂಗ್ರೆಸ್ ಸೇರಿ ಇಂಡಿ ಒಕ್ಕೂಟದ ಗ್ಯಾಂಗ್ ಗೆ ತಡೆಯಲು ಆಗುತ್ತಿಲ್ಲ. ಅದಕ್ಕಾಗಿ ಸುಮ್ಮನೇ ಇಲ್ಲಸಲ್ಲದ ಆಪಾದನೆಗಳನ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದೆ ಎನ್.ಡಿ.ಎ ಒಕ್ಕೂಟದಲ್ಲಿ ಇದ್ದಾಗ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶದ ಮತದಾರರ ಪಟ್ಟಿಯೇ ಪಶ್ಚಿಮ ಬಂಗಾಲದಲ್ಲೂ ಇದೆ ಎಂದು ಟೀಕಿಸಿ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದರು. ಆದರೆ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಅವರ ಕೋರಿಕೆಯನ್ನು ತಿರಸ್ಕರಿಸಿದ್ದರು. ಇದನ್ನು ಆಕ್ಷೇಪಿಸಿ ಮಮತಾ ಬ್ಯಾನರ್ಜಿ ಅವರು ತಮ್ಮ ಕೈಯಲ್ಲಿ ಇದ್ದ ಮತದಾರರ ಪಟ್ಟಿಯನ್ನು ಸ್ಪೀಕರ್ ಸೋಮನಾಥ್ ಚಟರ್ಜಿ ಅವರ ಮುಖದ ಮೇಲೆ ಎಸೆದಿದ್ದ ಘಟನೆಯನ್ನೂ ಗಮನಕ್ಕೆ ತಂದರು. ಅವತ್ತು ಎಸ್.ಐ.ಆರ್ ವಿರುದ್ಧವಾಗಿ ಇದ್ದಂತವರು, ಅವತ್ತು ಬೋಗಸ್ ಮತದಾರರ ಮತದಾರರ ಬಗ್ಗೆ ವಿರುದ್ಧವಾಗಿ ಇದ್ದ ಮಮತಾ ಬ್ಯಾನರ್ಜಿ ಮತ್ತು ಇಂಡಿ ಒಕ್ಕೂಟ, ಇವತ್ತು ಅದರ ಪರವಾಗಿ ನಿಂತಿದ್ದಾರೆ. ಉತ್ತರ ಪ್ರದೇಶ ಸೇರಿ ಇತರೆಡೆ ಚುನಾವಣಾ ಸೋಲು ಅವರನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಿದರು.
ಎಸ್‍ಐಆರ್ ವಿಚಾರದಲ್ಲಿ ಬಾಲಿಶವಾದ ಹೋರಾಟ ನಡೆಯುತ್ತಿದೆ. ಇದು ದೇಶದ ವಿರುದ್ಧವಾಗಿ ವ್ಯವಸ್ಥಿತವಾಗಿ ನಡೆಯುವ ಸಂಚು ಎಂದು ಆರೋಪಿಸಿದರು. ಹಿಂದೆ ರಾಹುಲ್ ಗಾಂಧಿಯವರು ಮಹಾದೇವಪುರದ ಮತದಾರರ ಪಟ್ಟಿ ಬಗ್ಗೆ ಪತ್ರಿಕಾ ಗೋಷ್ಟಿ ಮಾಡಿ ಆರೋಪ ಮಾಡಿದ್ದರು. ಅದಕ್ಕೆ ತಾವು ಸ್ಪಷ್ಟನೆ ನೀಡಿದ್ದನ್ನು ಉಲ್ಲೇಖಿಸಿದರು.
 
ರಾಹುಲ್ ಗಾಂಧಿಯವರು ಸರಿಯಾಗಿ ಹೋಮ್ ವರ್ಕ್ ಮಾಡೋದಿಲ್ಲ, ನಿದ್ದೆಗಣ್ಣಿನಲ್ಲಿ ಎದ್ದು ಬಂದು ಮಾತಾಡುವಂತಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದಿರುವ ಹೋರಾಟವು ಅಷ್ಟೇ, ಇದು ಒಂದು ರೀತಿ ಈ ವಿದ್ಯಾರ್ಥಿಗಳ ನೆಪದಲ್ಲಿ ಕಾಕ್ರೋಚ್ ಪಾರ್ಟಿಯವರು ಏರ್ಪಡಿಸಿದ ಹೋರಾಟ. ಇಷ್ಟರಲ್ಲಿ  ಬೆಂಗಳೂರಿನ ಬಹುತೇಕ ಅರ್ಬನ್ ನಕ್ಸಲರುಗಳೆಲ್ಲ ಸೇರಿಕೊಂಡಿದ್ದಾಗಿ ಆರೋಪಿಸಿದರು.

ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 119 (ಹಳೆ) ಎಸ್.ಐ.ಆರ್ ಆದಮೇಲೆ ಬೂತ್ ನಂಬರ್ 123 ಆಗಿದೆ. 2025ರಲ್ಲಿ ಆ ಬೂತ್ ನಲ್ಲಿ 347 ವೋಟ್ ಇತ್ತು. ಈಗ 54 ಹೆಚ್ಚುವರಿ ಮತದಾರರು ಅದಕ್ಕೆ ಸೇರ್ಪಡೆ ಆಗಿದೆ, 54 ಹೆಚ್ಚುವರಿ ಮತದಾರರು ಮತ್ತು ಎಸ್.ಐ.ಆರ್ ಪ್ರಕ್ರಿಯೆಯಲ್ಲಿ 17 ವೋಟು, ಒಟ್ಟಿಗೆ ಏನಾಗಿದೆ 54 ಮತಗಳು ಹೆಚ್ಚುವರಿಯಾಗಿ ಸೇರಿದೆ. ಹೆಚ್ಚುವರಿ ಸೇರ್ಪಡೆ ವಿವರ ಕೇಳಿದರೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
 
ಮನೆ ವಿಳಾಸ ಏನು ಕೊಟ್ಟಿದ್ದಾರೆ ಇದಕ್ಕೆ ಯಾವುದೇ ರೀತಿ ದಾಖಲೆ ಇಲ್ಲ, ಯಾರೋ ಒಬ್ಬ ಸುಬ್ಬಣ್ಣ ಅನ್ನೋವನು 54 52, 54 ಮನೆಗೆ ಸುಬ್ಬಣ್ಣ ಅನ್ನೋವರು ಒಬ್ಬರೇ ಅಗ್ರಿಮೆಂಟ್ ಮಾಡಿಕೊಟ್ಟು ಬಿಟ್ಟಿದ್ದಾರೆ, ಆ ಒಪ್ಪಂದದಲ್ಲಿ ಆಧಾರ್ ಕಾರ್ಡ್ ಇಲ್ಲ, ನಕಲಿ ಒಪ್ಪಂದ ಇದೆಂದು ದೂರಿದರು. ಅವರ ಮನೆ ವಿಳಾಸ, ಮತ್ತೆ ಅವರ ಮನೆ 54 ಮನೆಗೂ ಸಹ ಒಂದೇ ಒಪ್ಪಂದ ಇದೆ. 54 ಜನಕ್ಕೂ ಸಹ ಒಬ್ಬನೇ ಅಗ್ರಿಮೆಂಟ್ ಸುಬ್ಬಣ್ಣ ಅನ್ನೋವನೇ ಒಪ್ಪಂದ ಮಾಡಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಜಿಲ್ಲಾಧಿಕಾರಿ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳು ಬಹಳ ಗಂಭೀರತೆಯಿಂದ, ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ. 54 ನಕಲಿ ಹೆಸರುಗಳನ್ನು ಕೂಡಲೇ ಮತದಾರರ ಪಟ್ಟಿಯಿಂದ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ